ಶಿರಸಿ: ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರ ಬೆಂಬಲಿಗ ಶಕೀಲ್ ಶೇಖ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಶಕೀಲ್ ಶೇಖ್ ಮನೆಯಲ್ಲಿ ಅಕ್ರಮವಾಗಿ ಮತದಾರರಿಗೆ ಹಂಚಲು ಹಣ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಹಾಗೂ ದೂರಿನ ಆಧಾರದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

 ಐಟಿ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಶಿರಸಿಯ ಶಕೀಲ್ ಶೇಖ್ ಅವರ ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಶಿರಸಿಯ ಆಟೋ ಮಾರ್ಕ್ ಮಾಲೀಕರಾಗಿರುವ ಶಕೀಲ್ ಶೇಖ್ ಅವರು ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಉದ್ಯಮ ನಡೆಸುತ್ತಿದ್ದಾರೆ.

5 ಜನ ಚುನಾವಣಾಧಿಕಾರಿಗಳು ಹಾಗೂ ಐಟಿ ಅಧಿಕಾರಿಗಳು ಮನೆ ಕಚೇರಿಯನ್ನು ಶೋಧ ಕಾರ್ಯ ನಡೆಸುತ್ತಿದ್ದಾರೆ.
RELATED ARTICLES  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕುಮಟಾದಲ್ಲಿ ನಿರ್ಗತಿಕರಿಗೆ ನೆರವು