ಬೆಂಗಳೂರು: 2018-19ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏ.15ರ ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧಶಕಿ ಸಿ. ಶಿಖಾ ಅವರು, ಏ.16ರ ಬೆಳಗ್ಗೆಯಿಂದ ಎಲ್ಲ ಕಾಲೇಜುಗಳಲ್ಲೂ ಫಲಿತಾಂಶ ಲಭ್ಯವಾಗಲಿದೆ ಅಂತ ಹೇಳಿದ್ದಾರೆ.
ಸಿಇಟಿ ಏ. 29 ರಿಂದ ಮೇ. 1 ರ ವರೆಗೆ ನಡೆಯಲಿದೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ವ್ಯಾಸಂಗ ಮಾಡಿರುವ ಬಹುತೇಕ ವಿದ್ಯಾರ್ಥಿಗಳು ಸಿಇಟಿ ಬರೆಯುವುದರಿಂದ ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಿ ನಿರಾಳವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಪಿಯು ಫಲಿತಾಂಶವನ್ನು ಶೀಘ್ರ ಪ್ರಕಟಿಸಲು ತೀರ್ಮಾನಿಸಲಾಗಿದೆ.