ಹೊನ್ನಾವರ : ಇಡೀ ರಾಷ್ಟ್ರ ಅನಂತಕುಮಾರ ಹೆಗಡೆಯನ್ನು ಬೇಜವಾಬ್ದಾರಿ, ನಿಷ್ಕ್ರಿಯ ರಾಜಕಾರಣಿ ಎಂದು ಹೇಳುತ್ತಿದೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಿ ಅಂದ್ರೆ, ನಾನು ರಾಜಕಾರಣ ಮಾಡಲು ಬಂದಿದ್ದೀನಿ. ಸೇವೆ ಮಾಡಲಿಕ್ಕೆ ಅಲ್ಲ. ಧರ್ಮ ರಕ್ಷಣೆಗೆ ಬಂದಿದ್ದೀನಿ. ನಾನೇ ರಾಮ, ನಾನೇ ಲಕ್ಷ್ಮಣ ಎನ್ನುತ್ತಾನೆ. ಹಿಂದುಳಿದ ವರ್ಗಗಳ ಯುವಕರನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಹಳದೀಪುರದ ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ವಾಗ್ದಾಳಿ ನಡೆಸಿದರು.
ಬಡ ಹಿಂದೂಗಳು ಅಭಿವೃದ್ಧಿ ಆಗಬೇಕು. ಸಂಸದರಾದವರು ಯುವಕರಿಗೆ ಶಿಕ್ಷಣ ನೀಡಬೇಕು. ಬಡವರಿಗೆ ಮೂಲ ಸೌಕರ್ಯ ನೀಡಬೇಕು. ಚುನಾವಣೆಗೆ ಎರಡ್ಮೂರು ತಿಂಗಳಿದ್ದಾಗ ಜಿಲ್ಲೆಯಲ್ಲಿ ಓಡಾಟ ಶುರು ಮಾಡ್ತಾನೆ ಎಂದ ಅವರು ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಯುವಕರನ್ನು ಬಲಿ ಮಾಡುವ ಬದಲು ಈ ಕೆಲಸ ಮಾಡಿ ತೋರಿಸಲಿ ಎಂದರು.
ಇಂದು ಕುಮಟಾದ ಹೆಗಡೆ, ಮಿರ್ಜಾನ್, ಹೊನ್ನಾವರದ ಕರ್ಕಿ, ಹಳದಿಪುರ ಹಾಗೂ ಅರೆಅಂಗಡಿಯಲ್ಲಿ ಭಾಗಗಳಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ನಡೆದ ಕಾರ್ಯಕ್ರಮ ನಡೆಸಿದರು.
ಈ ವೇಳೆ ಕಾಂಗ್ರೆಸ್- ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.