ಶಿರಸಿ : ಒಳಗಣ್ಣಿನಿಂದಲೇ ಪ್ರಪಂಚ ಮತ್ತು ಅದಕ್ಕೂ ಮಿಗಿಲಾದುದನ್ನು ಕಾಣುತ್ತಿದ್ದ ಕವಿ, ಸಾಧಕ ರಮೇಶ್ ಹೆಗಡೆ ಅವರು ಇನ್ನಿಲ್ಲ . ಇವರು ಬದುಕನ್ನು ಸವಾಲಾಗಿ ಸ್ವೀಕರಿಸಿ ಬದುಕಿದ ರೀತಿಯೇ ಸಮಾಜಕ್ಕೆ ಸ್ಪೂರ್ತಿ.

18ವರ್ಷದಿಂದ ನಾಲ್ಕು ಗೋಡೆಯ ಮಧ್ಯೆ, ಹಾಸಿಗೆಯ ಮೇಲೆಯೇ ಅವರ ಜೀವನ! ಆದರೆ ಅವರ ಕ್ರಿಯಾಶೀಲತೆ, ಸಾಹಿತ್ಯ ಪ್ರೀತಿ, ಬರವಣಿಗೆ, ಓದು, ಸಾಮಾಜಿಕ ಕಳಕಳಿಯ ಮೂಲಕ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದರು.

ಆಸ್ಟಿಯೋ ಜೆನೆಸಿಸ್ ಇಂಪರ್ಫೆಕ್ಟಾ ಎಂಬ ಅತ್ಯಪರೂಪದ ಖಾಯಿಲೆಯಿಂದ ಬಳಲುತ್ತಿರುವ ಇವರಿಗೆ ಮಲಗಿದ್ದಲ್ಲಿಂದ ಎದ್ದೇಳಲೂ ಇನ್ನೊಬ್ಬರ ಸಹಾಯ ಬೇಕಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ನಾಲ್ಕನೆ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾಗಿಬಂತು. ಆದರೆ ಇವರ ಇಚ್ಛಾಶಕ್ತಿ ಜೀವನೋತ್ಸಾಹ ಇವರನ್ನು ಬಿಡಲಿಲ್ಲ. ತಮ್ಮ ಸಹೋದರಿಯ ಪುಸ್ತಕಗಳಿಂದ ಅಕ್ಷರ-ಬರವಣಿಗೆಗಳನ್ನು ಕಲಿತರು. ಅಲ್ಲಿಂದ ಮಲಗಿಕೊಂಡೆ ಕವನಗಳನ್ನು ಬರೆಯಲು ಶುರುಮಾಡಿದರು. ಆ ಮೂಲಕ ತಮ್ಮ ನೋವನ್ನು‌ ನುಂಗಿಕೊಳ್ಳುತ್ತಿದ್ದರು. ಹೀಗೆ ಇವರು ಬರೆದ ಕವನ ಸಂಕಲನ ‘ಕಾವ್ಯ ಚಿಗುರು’ ಬಿಡುಗಡೆ ಆಯಿತು‌.

RELATED ARTICLES  ಅರಣ್ಯದಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿನಿ : ಪೊಲೀಸರಿಂದ ತನಿಖೆ ಚುರುಕು

ಕಳೆದ 20 ವರ್ಷಗಳಿಂದ ಭಾವಗೀತೆ, ಮುಕ್ತಚಂದಸ್ಸು, ಗಝಲ್, ಹಾಯ್ಕುಗಳು, ಮಕ್ಕಳ ಕವನ ಸೇರಿದಂತೆ ಇವರ ಏಳು ಕವನ ಸಂಕಲನ ಬಿಡುಗಡೆಯಾಗಿದೆ. ಇವರ 30ಕ್ಕೂ ಹೆಚ್ಚು ಭಾವಗೀತೆಗಳು ಸಂಗೀತ ಸಂಯೋಜನೆಗೊಂಡು ಸಿ.ಡಿ ರೂಪದಲ್ಲಿ ಬಿಡುಗಡೆ ಆಗಿವೆ. ಜಿಲ್ಲಾ ಸಾಹಿತ್ಯ ಪರಿಷತ್, ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಇವರ ಸಾಹಿತ್ಯ ಕೃಷಿಗೆ ಅನೇಕ ಸಾಹಿತಿಗಳು ಮನಸೋತಿದ್ದು ಅವರುಗಳಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಕೂಡ ಒಬ್ಬರು.

RELATED ARTICLES  ಮದ್ಯದ ಜೊತೆಗೆ ವಿಷ ಸೇವಿಸಿ ಆತ್ಮಹತ್ಯೆ ಯತ್ನ

ವಿದ್ಯಾಭ್ಯಾಸದ ಹಸಿವು ನೀಗಿಸಲು ಇವರು ಕೆ‌.ಎಸ್. ಓ.ಯು ಮೂಲಕ ಬಿ‌.ಎ. ಕೂಡ ಓದುತ್ತಿದ್ದರು.