ಶಿರಸಿ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಮನೆಗೆ ಉತ್ತರ ಪ್ರದೇಶದ ನಾಗ ಸಾಧುಗಳು ಬಂದು ವಿಶೇಷ ಆಶೀರ್ವಾದ ನೀಡಿದ್ದಾರೆ.
ಉತ್ತರ ಕನ್ನಡದ ಶಿರಸಿಯಲ್ಲಿರುವ ಅನಂತ ಕುಮಾರ ಹೆಗಡೆ ನಿವಾಸಕ್ಕೆ ಬೆಳಗ್ಗೆ ಸಾಧುಗಳು ಆಗಮಿಸಿದ್ದರು. ಶ್ರೀ ಮಹಾಂತ ನಾಗಗಿರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಮನೆಗೆ ಬಂದ ನಾಗ ಸ್ವಾಮೀಜಿಗಳನ್ನ ಹೆಗಡೆ ದಂಪತಿಗಳು ಪೂಜಿಸಿ ಆಶೀರ್ವಾದ ಪಡೆದರು.
ಸುಮಾರು ಒಂದು ಗಂಟೆಗಳ ಕಾಲ ಮನೆಯಲ್ಲಿದ್ದ ನಾಗ ಸಾಧುಗಳು ಚುನಾವಣೆಯಲ್ಲಿ ಗೆಲ್ಲುವುದಾಗಿ ಹರಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯತೆಯ ಬಗೆಗೆ ತಮ್ಮದೇ ಮಾತುಗಳಿಂದ ವಿಶೇಷವಾಗಿ ಗುರ್ತಿಸಿಕೊಂಡಿರುವ ಅನಂತ ಕುಮಾರ್ ಹೆಗಡೆಯವರಿಗೆ ಆಶೀರ್ವಾದ ಸಿಕ್ಕಿರುವುದು ಬಿಜೆಪಿ ವಲಯದಲ್ಲಿ ಹರ್ಷ ತಂದಿದೆ ಎನ್ನಲಾಗಿದೆ.