ಮೇಷ:- ನಿಮ್ಮ ಇಚ್ಛಾಶಕ್ತಿಗೆ ಹೆಚ್ಚಿನ ಬಲ ಬರಲಿದೆ. ಅನೇಕ ಉತ್ತಮ ಕಾರ್ಯಗಳು ನಿಮ್ಮಿಂದ ನೆರವೇರಲ್ಪಡುವವು. ಅಲ್ಲದೆ ಕೋರ್ಟು ಕಚೇರಿ ಕೆಲಸಗಳಲ್ಲಿ ಗೆಲುವು ನಿಮ್ಮದಾಗಲಿದೆ.

ವೃಷಭ:- ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲೂ ತಾಳ್ಮೆ ಕಳೆದುಕೊಳ್ಳದೆ ಇರುವ ನಿಮ್ಮ ಗುಣ ಬಂಧುಬಾಂಧವರಲ್ಲಿ ಅಚ್ಚರಿ ಮೂಡಿಸುವುದು. ಅಂತೆಯೇ ನಿಮ್ಮ ತಾಳ್ಮೆಯೇ ನಿಮಗೆ ಮಹತ್ತರ ಕೀರ್ತಿ ತಂದುಕೊಡುವುದು.


ಮಿಥುನ:- ವಿನಾಕಾರಣ ಪರರ ವಿಷಯದಲ್ಲಿ ಭಾಗವಹಿಸದಿರಿ ಮತ್ತು ಮುಂಗೋಪವನ್ನು ನಿಯಂತ್ರಿಸಿದಲ್ಲಿ ಹೆಚ್ಚು ಅನುಕೂಲ ಹೊಂದುವಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ಕಟಕ:- ನಿಮ್ಮ ಕಾರ್ಯ ಯೋಜನೆಯನ್ನು ಕಾರ್ಯಗತಗೊಳಿಸಲು ಉತ್ತಮ ದಿನವಾಗಿದೆ. ಆಸ್ತಿ, ಮನೆಯ ವಿಚಾರದಲ್ಲಿ ಹೆಚ್ಚಿನ ಅನುಕೂಲ ಕಂಡುಬರುವುದು. ಸ್ತ್ರೀಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಸಿಂಹ:- ಹೊಸ ಆರ್ಥಿಕ ನೀತಿ ನಿಮಗೆ ಕೆಲವು ಕಳಂಕಗಳನ್ನು ತರುವ ಸಾಧ್ಯತೆ ಇದೆ. ಇದರಿಂದ ನೀವು ಪರರಿಗೆ ಕೊಡಬೇಕಾಗಿರುವ ಹಣ ಸಕಾಲದಲ್ಲಿ ದೊರೆಯದೆ ಇರುವುದರಿಂದ ವಿನಾಕಾರಣ ಟೀಕೆಗೆ ಒಳಗಾಗುವಿರಿ.

RELATED ARTICLES  ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ಸೇವಾ ದರ ದುಪ್ಪಟ್ಟು? : ಸಾರ್ವಜನಿಕ ವಲಯದಲ್ಲಿ ಆಕ್ಷೇಪ

ಕನ್ಯಾ:- ಮನೆಯ ಹಿರಿಯರೊಬ್ಬರಿಂದ ನಿಮ್ಮ ಪೂರ್ವಿಕರ ಆಸ್ತಿಗೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿಯೊಂದು ನಿಮಗೆ ಲಭ್ಯವಾಗಲಿದೆ. ಇದರಿಂದ ನಿಮಗೆ ಅನುಕೂಲವೇ ಆಗುವುದು. ನಿಮ್ಮ ಮಹತ್ತರ ಆಸೆಯೂ ಕೈಗೂಡುವುದು.

ತುಲಾ:- ಕೆಲಸ ಮಾಡುವ ಸ್ಥಳದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಒಳಗಾಗುವಿರಿ. ಇದರಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಉತ್ಸಾಹ ಮೂಡುವುದು. ಸಂಗಾತಿಯ ಸಲಹೆ ಸಹಕಾರಗಳನ್ನು ತಿರಸ್ಕರಿಸದಿರಿ.

ವೃಶ್ಚಿಕ:- ಮುಖ ನೋಡಿ ಮಣೆ ಹಾಕುವ ಮಂದಿ ನಿಮ್ಮ ಸುತ್ತಲಿರುವರು. ಅವರ ವರ್ತನೆಯು ನಿಮಗೆ ಬೇಸರವನ್ನುಂಟು ಮಾಡುವುದು. ಆದರೆ ಇದೆಲ್ಲವೂ ನಿಮ್ಮ ಜೀವನದಲ್ಲಿನ ಪರೀಕ್ಷೆಗಳು ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ.

ಧನುಸ್ಸು:-ಅಧಿಕ ಆತ್ಮವಿಶ್ವಾಸದಿಂದ ಕಾರ್ಯ ಪ್ರವೃತ್ತರಾಗುವಿರಿ. ಹಾಗಾಗಿ ಕಾರ್ಯಗಳು ನಿಮ್ಮ ಮನಸ್ಸಿನಂತೆ ಕೈಗೂಡುವವು. ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರುವುದು. ಪ್ರಯಾಣದಲ್ಲಿ ಎಚ್ಚರದಿಂದ ಇರಿ.

RELATED ARTICLES  ಶವದ ಮೇಲೆ ಯಾರೂ ರಾಜಕಾರಣ ಮಾಡಬಾರದು- ಸಿಎಂ ಸಿದ್ದರಾಮಯ್ಯ

ಮಕರ:- ಪ್ರಮುಖ ಕಾಗದ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಯಾವ ಕಾಲದಲ್ಲಿ ಆದರೂ ದಿಢೀರನೆ ತಪಾಸಣಾ ಅಧಿಕಾರಿಗಳು ನಿಮ್ಮ ಕಚೇರಿಗೆ ಬರುವ ಸಾಧ್ಯತೆ ಇದೆ. ಕುಲದೇವರ ಸ್ಮರಣೆ ಹಾಗೂ ಹಿರಿಯರ ಅಶೀರ್ವಾದ ಪಡೆದು ಮನೆಯಿಂದ ಹೊರಡಿ.

ಕುಂಭ:- ಓದುವ ಹಾಗೂ ಪ್ರಾಧ್ಯಾಪಕರ ವೃತ್ತಿಯಲ್ಲಿ ಆಸಕ್ತಿ ಹೊಂದಿದ ಜನರಿಗೆ ಅನೇಕ ರೀತಿಯ ಪ್ರೋತ್ಸಾಹ ಲಭ್ಯವಾಗಲಿದೆ. ಮನೆಯ ಕಡೆಯಿಂದ ಉತ್ತಮ ವಿಚಾರಗಳು ಬರುವವು. ವಿವಾಹ ಸಂಬಂಧ ಪ್ರಸ್ತಾಪ ಎದುರಾಗುವುದು.

ಮೀನ:- ವಿನಾಕಾರಣ ಅಪವಾದಗಳು ಎದುರಾಗುವ ಸಂಭವ ಇದೆ. ಅತ್ಯಂತ ನಂಬುಗೆಗೆ ಪಾತ್ರರಾದ ಸ್ನೇಹಿತರು ಅಥವಾ ಬಂಧುಗಳು ನಿಮ್ಮನ್ನು ಸರಿಯಾಗಿ ಅಥೈರ್‍ಸಿಕೊಳ್ಳುವುದಿಲ್ಲ. ಹಣವಿಲ್ಲದವನನ್ನು ಯಾರೂ ಆದರಿಸುವುದಿಲ್ಲ. ಹಾಗಾಗಿ ಹಣ ಸಂಪಾದಿಸುವ ಕಲೆ ತಿಳಿಯಿರಿ.