ಕುಮಟಾ: ಭಾರತೀಯ ಸಂಪ್ರದಾಯಗಳ ತಳಹದಿಯಲ್ಲಿ ಅತ್ಯುತ್ಕøಷ್ಟ ಶಿಕ್ಷಣ  ನೀಡುತ್ತಿರುವ ಕುಮಟಾ ತಾಲೂಕಿನ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ 8 ನೇ ತರಗತಿ ಪ್ರವೇಶಾತಿ ಪ್ರಕ್ರಿಯೆಗಳು ಪ್ರಾರಂಭವಾಗಿದೆ.

ಆಸಕ್ತರು  ಸಂಸ್ಥೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದು. ಅಥವಾ ನಂ 9900449292        ಸಂಪರ್ಕಿಸಲು ಕೋರಲಾಗಿದೆ.

ವಿಶಿಷ್ಟ ವರ್ಗಕೋಣೆಗಳ ಜೊತೆಗೆ ವರ್ಣಮಯ ಭಿತ್ತಿಚಿತ್ರದ ಗೋಡೆಗಳು ವಿನೂತನ ಕಲಿಕಾ ಸಾಮಗ್ರಿಗಳನ್ನು ಒಳಗೊಂಡು ಆಧುನಿಕ ಶಿಕ್ಷಣಕ್ಕೆ ಹೊಂದಿಸಲಾದ Sಛಿieಟಿಛಿe ಐಚಿb, ಸುಂದರ ನೈಸರ್ಗಿಕ ಪರಿಸರದಲ್ಲಿ ವೈವಿಧ್ಯಮಯ ಆಟೋಪಕರಣಗಳು, ವಿಸ್ತಾರವಾದ ಕ್ರೀಡಾಂಗಣ  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಾಂದಿ ಹಾಡುತ್ತಿದೆ.

ಕನ್ನಡ, ಸಂಸ್ಕøತ, ಹಿಂದಿ, ಇಂಗ್ಲೀಷ್ ವಿಷಯಗಳನ್ನು ಕಲಿಸುವ ಮೂಲಕ ಭಾರತೀಯ ಸಂಸ್ಕಾರಗಳನ್ನು ನೀಡುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಭಾಕಾರಂಜಿ ಆಟೋಟ ಸ್ಪರ್ಧೆಗಳಲ್ಲಿ  ಜಿಲ್ಲೆಯಲ್ಲಿಯೇ  ಪ್ರತಿವರ್ಷ ದಾಖಲೆಯ ಸಾಧನೆ ಮಾಡಿ ತನ್ನದೇ ಹೆಸರು ಗಳಿಸಿರುವ ಸೆಕೆಂಡರಿ ಹೈಸ್ಕೂಲ್‍ನಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಪರಿಸರ ಮಿತ್ರ ಶಾಲಾ ಪ್ರಶಸ್ತಿ, ವಿಜ್ಞಾನ ವಸ್ತಪ್ರದರ್ಶನ, ಇನ್ಸ್ಪಾಯರ್ಡ್ ಅವಾರ್ಡ್, ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯ & ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಪ್ರೌಢಶಾಲೆಯಾಗಿರುವುದು ಸಂಸ್ಥೆಯ ಹೆಮ್ಮೆ. 8ರಿಂದ 10 ನೇ ತರಗತಿಯವರೆಗೆ ನಮ್ಮ ಸಂಸ್ಥೆಯಲ್ಲಿ ಅಭ್ಯಾಸ ಮಡುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಅಭ್ಯರ್ಥಿ ದಾಖಲೆ ದೊರೆಯಲಿದ್ದು ಇದು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಉದ್ಯೋಗ ಆಯ್ಕೆ ಪ್ರಕ್ರಿಯೆಗಳಿಗೆ ಅನೂಕೂಲವಾಗಲಿದೆ.

RELATED ARTICLES  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ.

ವಿಶೇಷ ಸೌಲಭ್ಯಗಳು:
* 65 ವರ್ಷಗಳಿಂದ ಶಿಕ್ಷಣದಲ್ಲಿ ವೈವಿಧ್ಯತೆಯ ಮೂಲಕ ಹೆಸರು ಗಳಿಸಿರುವ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ, ಬರ್ಗಿ, ಬೆಟ್ಕುಳಿ, ಮೊರಬಾ, ನುಶಿಕೋಟೆ, ಬಳಲೆ, ಮಾದನಗೇರಿ, ಆಂದ್ಲೆ, ಮೊಗಟಾ,ಮೊರಳ್ಳಿ, ಮೂಲೇಕೇರಿ, ಹಿತ್ತಲಮಕ್ಕಿ, ಸಿದ್ದೇಶ್ವರ, ದೇವರಬಾವಿ, ತೋರ್ಕೆ, ದೇವಣ, ಉಳುವರೆ, ಬೊಳುಕುಂಟೆ, ಸಗಡಗೇರಿ, ದೇವಿಗದ್ದೆ ಊರಿನಿಂದ  ಹೈಸ್ಕೂಲಿಗೆ ಬರುವ ವಿದ್ಯಾರ್ಥಿಗಳು ಕಳೆದ 65 ವರ್ಷಗಳಿಂದ ಶಿಕ್ಷಣ ಪಡೆಯುತ್ತ್ತಿದ್ದಾರೆ.
* ಶುದ್ಧ ಹಾಗೂ ಸ್ವಾದಿಷ್ಟ ಮಧ್ಯಾಹ್ನದ ಊಟದ ವ್ಯವಸ್ಥೆ (ಅಕ್ಷರ ದಾಸೋಹ ಅಡಿಯಲ್ಲಿ) ಜನಮೆಚ್ಚುಗೆ ಗಳಿಸಿದೆ.
*ಶಾಲಾ ಕ್ರೀಡಾಂಗಣ, ಕ್ರೀಡೋಪಕರಣಗಳು
*ಗ್ರಂಥಾಲಯ
*ಕಂಪ್ಯೂಟರ್
*ವಿಜ್ಷಾನ ಪ್ರಯೋಗಾಲಯ ಪ್ರೊಜೆಕ್ಟ ಮೂಲಕ ಶಿಕ್ಷಣ ಒದಗಿಸಿರುವ  ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ನುರಿತ ಹಾಗೂ ಅನುಭವಿ ಶಿಕ್ಷಕ ವೃಂದವನ್ನು ಹೊಂದಿದೆ.

RELATED ARTICLES  ಸಂಘಟನೆಗಳು ನ್ಯಾಯಯುತವಾಗಿ ಹೋರಾಟ ನಡೆಸುವವರಿಗೆ ಸಹಕಾರ ನೀಡಬೇಕು: ಸುಬ್ರಾಯ ವಾಳ್ಕೆ