ಶಿರಸಿ: ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್ ಜೂ. 7 ರಿಂದ ಮೂರು ದಿನಗಳ ಕಾಲ ಶಿರಸಿಯಲ್ಲಿ ರಾಜ್ಯ ಮಟ್ಟದ ಯೋಗ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಭಾಗವಹಿಸುವ ಆಸಕ್ತರಿಗಾಗಿ ಏ.17ರಿಂದ 25ರ ತನಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯೋಗ ಪಟುಗಳಿಂದ ವಿಶೇಷ ತರಬೇತಿ ಆಯೋಜಿಸಲಾಗಿದೆ.
8 ರಿಂದ 16 ವರ್ಷದವರಿಗೆ ಬೆಳಿಗ್ಗೆ 8 ರಿಂದ 10 ಹಾಗೂ ಸಂಜೆ 4ರಿಂದ 6 ರ ತನಕ 18 ವರ್ಷ ಮೇಲ್ಪಟ್ಟವರಿಗೆ ತರಬೇತಿ ನೀಡಲಾಗುತ್ತದೆ. ಅನಿಲ್ ಕರಿ 9845329306, ಮಂಗಳಗೌರಿ ಭಟ್ಟ 9449983189, ಪ್ರಕಾಶ ನೇತ್ರಾವಳಿ 9242122867, ಶ್ರೀಧರ ಇಸಳೂರು 9242120236, ಜನಾರ್ಧನ ಆಚಾರ್ಯ 9242529900ಗೆ ಸಂಪರ್ಕ ಮಾಡಬಹುದು ಎಂದು ಪ್ರಕಟಣೆಯಲ್ಲಿ ಫೆಡರೇಶನ್ ಅಧ್ಯಕ್ಷ ಅನಿಲ್ ಕರಿ ತಿಳಿಸಿದ್ದಾರೆ.