ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಪ್ತ ಕೃಷ್ಣ ಎಸಳೆ ಮನೆಗೆ ಮಂಗಳವಾರ ಐಟಿ ದಾಳಿ ನಡೆದಿದೆ.
ಚುನಾವಣೆ ಸಮೀಪಿಸುತ್ತಿರುವಂತೆಯೇ ಈ ದಾಳಿ ನಡೆದಿದ್ದು ಮಹತ್ವ ಪಡೆದುಕೊಂಡಿದೆ. ಕೃಷ್ಣ ಎಸಳೆ ಕಳೆದ ಅನೇಕ ವರ್ಷಗಳಿಂದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದರು.
ಹಾಗೆಯೇ ಬಿಜೆಪಿ ಗ್ರಾಮೀಣ ಘಟಕಾಧ್ಯಕ್ಷ ಆರ್.ವಿ ಹೆಗಡೆ ಚಿಪಗಿಯವರ ಮನೆಗೂ ಇದೇ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗೋವಾ ಹಾಗೂ ಹುಬ್ಬಳ್ಳಿಯಿಂದ ಆಗಮಿಸಿದ ಐದಕ್ಕೂ ಹೆಚ್ಚು ಜನ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡುತಿದ್ದ ಮಹೇಂದ್ರ HUV ,ಇನೋವಾ,ಷಿಪ್ಟ್ ಕಾರ್ ,ಸಫರಿ ಕಾರ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ಮನೆಯಲ್ಲಿ ಶೋಧಕಾರ್ಯ ಮುಂದುವರೆದಿದೆ..