ಮೇಷ:- ನಿಮ್ಮ ಬಳಿ ವಿವಿಧ ತೆರನಾದ ಜನರು ಬರುವರು. ಅವರುಗಳಲ್ಲಿ ಕೆಲವರು ತಮ್ಮ ಸ್ವಾರ್ಥವನ್ನು ಮೊದಲು ಪೂರೈಸಿಕೊಳ್ಳಲು ಬರುವರು. ಅಂಥವರನ್ನು ಎಚ್ಚರದಿಂದ ಸಾಗಹಾಕಿ.


ವೃಷಭ:- ನಿಮ್ಮ ಸಾಮಾಜಿಕ ಕಳಕಳಿಯು ಬಹು ಮೆಚ್ಚುಗೆಗೆ ಪಾತ್ರವಾಗುವುದು ಮತ್ತು ನಿಮ್ಮ ಮಾರ್ಗದರ್ಶನವನ್ನು ನೆರೆಹೊರೆಯ ಮಂದಿ ಬಯಸುತ್ತಾರೆ. ಇದರಿಂದ ಅತಿ ಹೆಚ್ಚಿನ ಪ್ರಶಂಸೆ ಪಡೆಯುವಿರಿ.


ಮಿಥುನ:- ಕೆಲಸದ ಸ್ಥಳದಲ್ಲಿನ ಕೆಲವರು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುವರು. ಅವರನ್ನು ಚಾತುರ್ಯದಿಂದಲೇ ದೂರ ಇಡುವುದು ಒಳ್ಳೆಯದು. ಇಲ್ಲವೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಅವರನ್ನು ದೂರ ಮಾಡುವುದು ಕ್ಷೇಮ.

ಕಟಕ:- ತೀರಾ ಸರಳವಾದ ಮಾರ್ಗದಿಂದ ಧನಲಾಭದ ದಾರಿ ತೆರೆದುಕೊಳ್ಳುವುದೆಂಬ ದಡ್ಡತನವನ್ನು ಕೈಬಿಟ್ಟರೆ ಒಳಿತಾಗುವುದು. ಕಠಿಣ ಪರಿಶ್ರಮವಿಲ್ಲದೆ ಹಣಕಾಸು ಸುಲಭವಾಗಿ ದೊರೆಯುವುದಿಲ್ಲ.

ಸಿಂಹ:- ಸಮಾಜದಲ್ಲಿ ಜನಾನುರಾಗಿಯಾಗುವಂತಹ ವಿಶಿಷ್ಟ ಅವಕಾಶವೊಂದನ್ನು ನೀವು ಸಂಪಾದಿಸಿದ್ದೀರಿ. ಅನುಪಮ ಶಕ್ತಿಯೊಂದು ನಿಮ್ಮ ಬೆಂಗಾವಲಿಗೆ ನಿಲ್ಲುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

RELATED ARTICLES  ರಸ್ತೆ ಅಗಲೀಕರಣದ ನೆಪದಲ್ಲಿ ಮಾನವೀಯತೆ ಮರೆತರಾ ಅಧಿಕಾರಿಗಳು? ಗೋಳಿಟ್ಟಿತು ಬಡ ಜೀವ!

ಕನ್ಯಾ:- ನಡೆಯಬೇಕಾದ ದೂರವನ್ನು ಕ್ರಮಿಸುವ ಶಕ್ತಿ ನಿಮಗಿದೆ. ನೀವು ಕ್ರಮಿಸುವ ದಾರಿ ನೇರವಾಗಿದ್ದು ಕಠಿಣವಾಗಿರುವುದು. ಅದಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂಬುದನ್ನು ಅರಿಯಿರಿ. ಭಗವಂತನ ನಾಮಸ್ಮರಣೆ ನಿಮಗೆ ಮಾರ್ಗಸೂಚಿ ಆಗುವುದು.

ತುಲಾ:- ಬಹಳ ದಿನಗಳಿಂದಲೂ ಅಪೂರ್ಣವಾಗಿದ್ದ ನಿಮ್ಮ ಸಂಶೋಧನೆಯ ಕೆಲಸಗಳಿಗೆ ಸುಖಕರ ಅಂತ್ಯ ಕಂಡು ಬರುವುದು. ನಿಮ್ಮ ಮಾರ್ಗದರ್ಶಕರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು.

ವೃಶ್ಚಿಕ:- ಬರೀ ಕಷ್ಟಗಳೇ ಅನುಭವಿಸಿ ಬೇಸರ ಬಂದಿರಬಹುದು. ಇದರಿಂದ ಮನಸ್ಸು ಗಲಿಬಿಲಿಗೊಂಡು ವಾಹನದಲ್ಲಿ ಸಂಚರಿಸುವಾಗ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಮನಸ್ಸು ವ್ಯಗ್ರವಾಗಿರುವಾಗ ವಾಹನ ಚಲಾಯಿಸದಿರಿ.

ಧನುಸ್ಸು:- ಜನ್ಮಶನಿಯು ಎಲ್ಲಾ ಕೆಲಸಗಳಲ್ಲಿ ಮಂದ ಪ್ರಗತಿಯನ್ನುಂಟು ಮಾಡುತ್ತಿರುವರು. ನಿಧಾನವೇ ಪ್ರಧಾನ ಎಂದು ಶನಿಮಹಾರಾಜನ ಆಟಗಳಿಗೆ ತಲೆಬಾಗದೆ ವಿಧಿಯಿಲ್ಲ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ.

RELATED ARTICLES  ಆಧಾರ್ ಕಾರ್ಡ್ ಲಿಂಕ್ ಮಾಡಲು ಕರೆ ಬಂದರೆ ಎಚ್ಚರ! ಯುವಕನಿಗೆ ಬಿತ್ತು 75,000 ರೂ ನಾಮ

ಮಕರ:- ಆದಷ್ಟು ಎಚ್ಚರದಿಂದ ಇರಿ. ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಕೆಲವರು ಮೂಗು ತೂರಿಸಿ ಇಲ್ಲಸಲ್ಲದ ಸಲಹೆಗಳನ್ನು ನೀಡಿ ನಿಮ್ಮ ದಾರಿ ತಪ್ಪಿಸಲು ಹೊಂಚು ಹಾಕುತ್ತಿರುವರು. ನಿಮ್ಮ ಬುದ್ಧಿಶಕ್ತಿಯನ್ನು ನಂಬಿ ಕೆಲಸ ಮಾಡಿ.

ಕುಂಭ:- ನಿಮ್ಮ ಪ್ರತಿಭೆಯನ್ನು ಧಾರಾಳವಾಗಿ ಪ್ರದರ್ಶಿಸಲು ಎಲ್ಲಾ ರೀತಿಯ ಅವಕಾಶಗಳು ಹೇರಳವಾಗಿ ಬರುವವು. ಎಣ್ಣೆ ಬಂದಾಗ ಕಣ್ಣುಮುಚ್ಚಿಕೊಂಡರು ಎಂಬ ಮಾತಿನಂತೆ ಆಗದೆ ತಾನಾಗಿ ಬಂದ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ.

ಮೀನ:- ನಿಮ್ಮದು ಮೀನಿನಂತೆ ಚುರುಕಾದ ಓಡಾಟ, ನಡೆನುಡಿ ಇದ್ದರೂ ಗಾಳಕ್ಕೆ ಸಿಕ್ಕ ಮೀನು ಒದ್ದಾಡುವಂತೆ ಒದ್ದಾಡುವಿರಿ. ವಿವೇಚನೆ ಬಳಸಿ ಕಾರ್ಯಪ್ರವೃತ್ತರಾಗಿ. ಅನವಶ್ಯಕ ಕೆಲಸಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಡಿ.