ಭಟ್ಕಳ: ಲೋಕಸಭಾ ಚುನಾವಣೆಯ ಪ್ರಯುಕ್ತ ಲೋಕಸಭಾ ಕ್ಷೇತ್ರದ 11 ತಾಲೂಕಾ ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ಹಾಗೂ ಬಿರುಸಿನ ತಯಾರಿಯೂ ಮಂಗಳವಾರದಂದು ಇಲ್ಲಿನ ಆನಂದ ಆಶ್ರಮ ಕಾನ್ವೆಂಟ್ ಶಾಲಾ ಆವರಣದಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಅವರ ನೇತೃತ್ವದಲ್ಲಿ ನಡೆಯಿತು. 

ಜಿಲ್ಲೆಯಲ್ಲಿ ಎಪ್ರಿಲ್ 23ರಂದು ಕೆನರಾ ಕ್ಷೇತ್ರದ ಸಂಸತ್ ಚುನಾವಣೆಯು ನಡೆಯಲಿದ್ದು ಈಗಾಗಲೇ ಅಗತ್ಯದ ಸಿಬ್ಬಂದಿಗಳ ನೇಮಕವಾಗಿ ಮೊದಲ ಹಂತದ ತರಬೇತಿ ಕಾರ್ಯದ ಬಳಿಕ ಚುನಾವಣಾ ಕರ್ತವ್ಯದ ಕುರಿತು ಹಾಗೂ ಮತಯಂತ್ರ ಮತ್ತು ವಿ.ವಿ. ಪ್ಯಾಟ್ ಕುರಿತು ಮಾಹಿತಿ ನೀಡಲಾಗಿತ್ತು.

ಮಂಗಳವಾರದಂದು ಬೆಳಿಗ್ಗೆ 8 ಗಂಟೆಗೆ ಎರಡನೇ ಹಂತದಲ್ಲಿ ಮತಯಂತ್ರ ಮತ್ತು ವಿ.ವಿ. ಪ್ಯಾಟ್ ಕುರಿತು ಮಾಹಿತಿ ನೀಡುವುದರೊಂದಿಗೆ ಮತಗಟ್ಟೆಯಲ್ಲಿ ಚುನಾವಣೆ ದಿನದಂದು ತೆಗೆದುಕೊಳ್ಳಬೇಕಾದ ಮುಖ್ಯ ಕ್ರಮದ ಬಗ್ಗೆ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪ ವಿಭಾಗದ ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ವಿವರಿಸಿದರು. 

RELATED ARTICLES  ಕೆನರಾ ಕಾಲೇಜು ಸೊಸೈಟಿ ನೂತನ ಆಡಳಿತ ಮಂಡಳಿ ಅಸ್ಥಿತ್ವಕ್ಕೆ. : ಅಧ್ಯಕ್ಷರಾಗಿ ರಾಮಚಂದ್ರ ರಂಗಪ್ಪ ಕಾಮತ್

25 ಕೊಠಡಿಯಲ್ಲಿ 3 ಬ್ಲಾಕಗಳಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪ ವಿಭಾಗದ ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ, ತಹಸೀಲ್ದಾರ ಎನ.ಬಿ.ಪಾಟೀಲ್ ಸೇರಿದಂತೆ ಸೇಕ್ಟರ ಆಫೀಸರ್ಸಗಳು ತರಬೇತಿಯನ್ನು ನೀಡಿದರು.

ತರಬೇತಿಯಲ್ಲಿ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಮುಂಡಗೋಡ, ಜೋಯಿಡಾ, ಯಲ್ಲಾಪುರ, ಹಳಿಯಾಳ ತಾಲೂಕುಗಳಿಂದ ಒಟ್ಟೂ 1096 ಪೋಲಿಂಗ್ ಅಧಿಕಾರಿಗಳು ಪಾಲ್ಗೊಂಡಿದ್ದು ಎಲ್ಲರನ್ನು 274 ತಂಡವನ್ನು ರಚಿಸಿ ಒಂದು ಕೊಠಡಿಯಲ್ಲಿ 4 ಸೇಕ್ಟರ ಆಫೀಸರ್ಸಗಳು ತರಬೇತಿಯನ್ನು ನೀಡಿದ್ದಾರೆ. 1 ಬ್ಲಾಕ್‍ನಲ್ಲಿ 11 ಕೊಠಡಿಯಂತೆ 32 ಜನ, 2 ಬ್ಲಾಕನಲ್ಲಿ 11 ಕೊಠಡಿಯಂತೆ 52 ಜನ ಹಾಗೂ 3 ಬ್ಲಾಕ್‍ನಲ್ಲಿ 3 ಕೊಠಡಿಯಂತೆ 182 ಜನ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ಕಾರ್ಯ ನೀಡಲಾಯಿತು. 

RELATED ARTICLES  ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಸಾವು.

ಏಪ್ರಿಲ್ 22 ರಂದು ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರ ಹಾಗೂ ವಿವಿಪ್ಯಾಟ್ ನೀಡಲಾಗುವದು ಹಾಗೂ ಎಲ್ಲಾ ಅಧಿಕಾರಿಗಳಿಗೆ ಮತಗಟ್ಟೆಗೆ ತೆರಳುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಅಧಿಕಾರಿಗಳು ತಿಳಿಸಿದರು. 


ಈ ಸಂದರ್ಬದಲ್ಲಿ ಹೊನ್ನಾವರ ತಹಸೀಲ್ದಾರ ಮಂಜುಳಾ ಭಜಂತ್ರಿ, ಚುನಾವಣಾ ಶಿರಶೇದ್ದಾರ ಸಂತೋಷ ಭಂಡಾರಿ, ಸಹಾಯಕ ಆಯುಕ್ತರ ಕಛೇರಿ ಶಿರಸೇಲ್ದಾರ ಎಲ್.ಎ.ಭಟ್ಟ ಹೊನ್ನಾವರ ಕಛೇರಿ ಸಿಬ್ಬಂದಿಗಳು, ತಾಲೂಕಾ ಕಛೇರಿ ಸಿಬ್ಬಂದಿಗಳು ಭಟ್ಕಳ-ಹೊನ್ನಾವರ ಭೂಮಾಪನಾ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.