ಅಂಕೋಲಾ : ಚುನಾವಣೆಯ ಹೊಸ್ತಿಲಿನಲ್ಲಿ ಮಗಳ ಹುಟ್ಟುಹಬ್ಬವನ್ನು ಬಂಧು ಮಿತ್ರರ ಎದುರು ಮತದಾನ ಜಾಗೃತಿಯ ಪ್ರಕ್ರಿಯೆಗೆ ಬಳಸಿಕೊಂಡಿದ್ದು ಕೂಡ ಸಂಭ್ರಮದ ಜೊತೆ ದೇಶದ ಹೊಣೆಯನ್ನು ನಿರ್ವಹಿಸಿದ ಸಾರ್ಥಕತೆಯ ಕ್ಷಣ ಆಗಿರುತ್ತದೆ  ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಅಂಬಾರಕೊಡ್ಲದಲ್ಲಿ ಖೇಮು ನಾಯ್ಕ ಮತ್ತು ಮಯೂರಿ ನಾಯ್ಕ ದಂಪತಿಯ ಮಗಳು ಖ್ಯಾತಿಯ 5ನೇ ವರ್ಷದ ಹುಟ್ಟುಹಬ್ಬದಲ್ಲಿ ಬರುವ ಲೋಕಸಭೆಯ ನಿಮಿತ್ತ ಮತನಾನ ಜಾಗೃತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

RELATED ARTICLES  ನನ್ನ ಅವಧಿಯಲ್ಲಿ ಅನೇಕ ಕಾರ್ಯಗಳು ನಡೆದಿವೆ : ಮಾಜಿ ಶಾಸಕಿ ಶಾರದಾ ಶೆಟ್ಟಿ.

ನಾವು ಮಕ್ಕಳನ್ನು ಬೆಳೆಸುವುದರ ಜೊತೆ ನಾಳೆಯ ಭಾರತವನ್ನು ಅವರ ಕೈಗೆ ಕೊಡಲು ಸಜ್ಜುಗೊಳ್ಳಬೇಕಾಗಿದೆ. ಹಾಗಾಗಿ ಸದೃಢ ಭಾರತದ ನಿರ್ಮಾಣಕ್ಕೆ ಖ್ಯಾತಿಯ ಹುಟ್ಟು ಹಬ್ಬ ಸಣ್ಣ ನೆಪ ಮಾಡಿಕೊಂಡಿದ್ದು ಅಭಿಮಾನದ ಸಂಗತಿ. ಕೇವಲ ಕೇಕು, ಡ್ರೆಸ್ಸು, ಸ್ವೀಟು ಅನ್ನದೇ ಪುಟಾಣಿಯ ಹುಟ್ಟು ಹಬ್ಬ ಸಮಾಜಮುಖಿ ಹಬ್ಬವಾಗಿ ಮಾರ್ಪಟ್ಟಿದ್ದು ಒಳ್ಳೆಯ ಬೆಳವಣಿಗೆ. ಕರಪತ್ರದಲ್ಲಿ ಮತಗಟ್ಟೆಗೆ ತೆರಳಿ ಹಾಕುವ ಒಂದೊಂದು ಮತ ತನಗೆ ಹುಟ್ಟುಹಬ್ಬಕ್ಕಾಗಿ ಕೊಡುವ ಒಂದೊಂದು ಚಾಕಲೇಟ್‍ಗೆ ಸಮ ಎಂದು ಖ್ಯಾತಿ ಹೇಳಿರುವುದು ಮನೋಜ್ಞ ಎಂದು ಅರವಿಂದ ಕರ್ಕಿಕೋಡಿ ನುಡಿದರು.

RELATED ARTICLES  ಹೊನ್ನಾವರ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಶಿವರಾಜ ಮೇಸ್ತಾ ಆಯ್ಕೆ


ಮುಖ್ಯ ಅತಿಥಿಯಾಗಿ ಪಾಲ್ಗೊಂಡ ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ. ಪ್ರಕಾಶ ನಾಯಕ ಅವರು ಧ್ಚನಿಪೂರ್ಣ ಹಾಡು ಹಾಡುವುದರ ಮೂಲಕ ಮಗುವಿಗೆ ಶುಭಾಶಯ ಹಾರೈಸಿದರು.

ವೇದಿಕೆಯಲ್ಲಿ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ವಸಂತ ನಾಯ್ಕ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಮಯೂರ್ ಎಂ. ನಾಯ್ಕ  ಆಶಯ ಗೀತೆ ಹಾಡಿದರು. ಖೇಮು ನಾಯ್ಕ ಸ್ವಾಗತಿಸಿದರು. ನಾಗರಾಜ ಎನ್, ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಮಯೂರಿ ನಾಯ್ಕ ವಂದಿಸಿದರು.