ಮೇಷ:- ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾಗ್ರತೆಯಿಂದ ರೂಪಿಸಿ. ಇದರಿಂದ ಗೆಲುವು ದೊರೆಯಲಿದೆ. ನಿಮ್ಮ ಹಿಂಬಾಲಕರು ನಿಮ್ಮ ಕಾರ್ಯ ಯೋಜನೆಗಳಿಗೆ ಬೆಂಬಲ ಸೂಚಿಸುವರು. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ.
ವೃಷಭ:- ಮನೋ ನಿಯಾಮಕ ರುದ್ರದೇವರ ಸ್ಮರಣೆ ಮತ್ತು ಪ್ರಾರ್ಥನೆಯಿಂದ ಮನಸ್ಸಿನಲ್ಲಿ ಕವಿದಿರುವ ಕಾರ್ಮೋಡಗಳು ದೂರಕ್ಕೆ ಸರಿಯಲಿವೆ. ಮಗನಿಗೆ ಉತ್ತಮ ಸಂಬಂಧ ಕೂಡಿ ಬರುವುದರಿಂದ ಮನೆಯಲ್ಲಿ ಸಂತಸ ಮೂಡುವುದು.
ಮಿಥುನ:- ವ್ಯಾಪಾರ ವಿಷಯದಲ್ಲಿ ಎಲ್ಲಾ ನಿಟ್ಟಿನಿಂದಲೂ ಜಾಗ್ರತೆ ಇರಲಿ. ನಿರ್ಲಕ್ಷ್ಯದಿಂದ ನಷ್ಟ ಆಗುವ ಸಂದರ್ಭವಿದೆ. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಕೊಳ್ಳುವರು. ಕುಟುಂಬದವರೊಂದಿಗೆ ಸ್ನೇಹದಿಂದ ವರ್ತಿಸಿ.
ಕಟಕ:- ಹತ್ತಿರದ ಊರುಗಳಿಗೆ ಹೋಗುವ ಪ್ರವಾಸಗಳಿಂದಾಗಿ ವ್ಯವಹಾರಿಕ ಗೆಲುವು ಸಾಧ್ಯವಾಗಲಿದೆ. ಮಕ್ಕಳ ಆಟ ಪಾಠಗಳಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಜನ್ಮಸ್ಥ ರಾಹು ಮಾನಸಿಕ ಕಿರಿಕಿರಿಯನ್ನುಂಟು ಮಾಡುವನು.
ಸಿಂಹ:- ದೂರದ ಬಂಧುಗಳ ಆಗಮನದಿಂದಾಗಿ ಹೊಸ ಅವಕಾಶದ ಬಾಗಿಲು ತೆರೆಯಲು ಸಾಧ್ಯವಿದೆ. ಅಸಾಧ್ಯವಾದುದನ್ನು ಸಾಧಿಸಿದ ತೃಪ್ತಿ ನಿಮ್ಮದಾಗುವುದು. ಒಡಹುಟ್ಟಿದವರು ನಿಮ್ಮ ಸಂತೋಷವನ್ನು ಹೆಚ್ಚಿಸುವರು.
ಕನ್ಯಾ:- ಹಣವನ್ನು ಕೊಡುವ, ಕೊಡಿಸುವ ಕೆಲಸ ಮಾತ್ರ ಮಾಡಲೇಬೇಡಿ. ತೊಂದರೆಗೆ ಸಿಲುಕಿಕೊಳ್ಳುವಿರಿ. ಕೆಲವೊಮ್ಮೆ ನೀವೇ ಹಣವನ್ನು ಪಾವತಿಸುವ ಸಂದರ್ಭ ಎದುರಾಗುವುದು. ಇಲ್ಲಸಲ್ಲದ ಸಬೂಬು ಹೇಳಿ ಬಂದವರನ್ನು ನಯವಾಗಿ ಸಾಗ ಹಾಕುವುದು ಉತ್ತಮ.
ತುಲಾ:- ಮಾತುಮಾತಿಗೆ ಸಿಟ್ಟು ಮಾಡಿಕೊಳ್ಳುವಂತಹ ಅತಿರೇಕಗಳು ಬೇಡ. ತಾಳ್ಮೆಯಿಂದಲೇ ಹೆಚ್ಚಿನ ಸಿದ್ಧಿ ದೊರೆಯಲಿದೆ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ. ಅಗತ್ಯವಿದ್ದಲ್ಲಿ ಮಾತ್ರ ಹೆಚ್ಚಿನ ಹಣ ವ್ಯಯಿಸಿ. ಅನವಶ್ಯಕ ಖರೀದಿಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.
ವೃಶ್ಚಿಕ:- ತುರ್ತಾಗಿ ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುವುದು. ಸದಾ ಕೆಲಸ ಕೆಲಸ ಎಂದು ದುಡಿಮೆಯ ಕಡೆಗೆ ಲಕ್ಷ್ಯ ನೀಡುವ ನೀವು ಮಡದಿ ಮಕ್ಕಳ ಆರೋಗ್ಯದ ಕಡೆಗೂ ಗಮನ ಹರಿಸುವುದು ಒಳ್ಳೆಯದು.
ಧನುಸ್ಸು:- ಗೆಳೆಯರ ಬಗೆಗೆ ನೀವು ಮೃದು ಹೃದಯ ಹೊಂದಿದಲ್ಲಿ ಅದರಿಂದ ಹಾನಿಯನ್ನೇ ಅನುಭವಿಸುವಿರಿ. ಅವರು ನಿಮ್ಮ ನಂಬಿಕೆಗೆ ದ್ರೋಹ ಬಗೆಯುವರು. ಆದಷ್ಟು ದುಷ್ಟ ಸ್ನೇಹಿತರಿಂದ ದೂರ ಇರುವುದು ಒಳ್ಳೆಯದು.
ಮಕರ:- ನೀರಿನ ವಿಚಾರದಲ್ಲಿ ಕಾಳಜಿ ಇರಲಿ. ಜಲಾಶಯ, ಸಮುದ್ರದ ಕಡೆ ಸಂಚರಿಸುವಾಗ ಎಚ್ಚರಿಕೆ ಇರಲಿ. ಮನೆಯಿಂದ ಹೊರಡುವಾಗ ಲಕ್ಷ್ಮೀನರಸಿಂಹ ದೇವರನ್ನು ನೆನೆಯಿರಿ ಮತ್ತು ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ.
ಕುಂಭ:- ವಿನಾಕಾರಣ ಒಡಹುಟ್ಟಿದವರೇ ಮನಸ್ಸಿಗೆ ನೋವು ತರುವ ಸಾಧ್ಯತೆ ಇದೆ. ಅವರ ವಿಚಾರಧಾರೆ ಅವರಿಗೆ ಬಿಟ್ಟದ್ದು. ಅವರಿಗೆ ಸಲಹೆ ನೀಡದಿರುವುದು ಒಳ್ಳೆಯದು. ನಿಮಗೇ ಬೇಕಾದಷ್ಟು ಕೆಲಸವಿರುವಾಗ ಪರರ ಉಸಾಬರಿ ಏಕೆ?
ಮೀನ:- ನೀರಾವರಿ ಕೃಷಿಕರಿಗೆ ಹೆಚ್ಚಿನ ಲಾಭವುಂಟಾಗುವುದು. ರೈತಾಪಿ ಜನರಿಗೆ ತಾವು ಬೆಳೆದ ಧಾನ್ಯಗಳಿಗೆ ಉತ್ತಮ ಬೆಂಬಲ ಬೆಲೆ ದೊರೆಯುವುದು. ಕೆಲವರಿಗೆ ಸರಕಾರದಿಂದ ಹಣಕಾಸು ಬರುವುದು.