ಶಿರಸಿ: ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಬಕ್ಕಳದ ತಲ್ಲಿ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಹೊತ್ತಿಕೊಂಡ ಬೆಂಕಿಯಿಂದ ಮೂವರ ಮನೆ ಹಾಗೂ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾದ ಘಟನೆ ತಾಲೂಕಿನಲ್ಲಿ ಅಂದಾಜು 40 ಲಕ್ಷ ರೂಪಾಯಿಗೂ ಹೆಚ್ಚು ಹಾನಿ ಸಂಭವಿಸಿದೆ ಎನ್ನಲಾಗಿದೆ.
ಸತ್ಯನಾರಾಯಣ ಸುಬ್ರಾಯ ಹೆಗಡೆ, ಗಜಾನನ ಮಾದೇವ ಹೆಗಡೆ ಹಾಗೂ ಗಣಪತಿ ಮಾಬ್ಲೇಶ್ವರ ಹೆಗಡೆ ಎಂಬುವವರ ಮನೆಗಳು ಅಗ್ನಿ ಅನಾಹುತಕ್ಕೆ ಹಾನಿಯಾಗಿದೆ. ಮನೆಯು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಮನೆಯಲ್ಲಿದ್ದ ಸುಮಾರು 20 ಕ್ವಿಂಟಾಲ್ ಅಡಿಕೆ ಸಹ ಬೆಂಕಿಗೆ ಅನಾಹುತಕ್ಕೆ ಬಲಿಯಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಕಿರಣ್ ಪರಿಶೀಲನೆ ನಡೆಸಿ ಪಂಚನಾಮೆ ಮಾಡಿಕೊಂಡು ಹೋಗಿದ್ದು, ಆದಷ್ಟು ಶೀಘ್ರ ಅಗತ್ಯ ಪರಿಹಾರ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ