ಶಿರಸಿ: ಕೇವಲ ಜೆಡಿಎಸ್-ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ಮಾಡುವ ಆರೋಪ ಇತ್ತು. ಹೀಗಾಗಿ, ಕೇವಲ ತೋರಿಕೆಗೆ ಬಿಜೆಪಿ ಮುಖಂಡರ ಮನೆ ಮೇಲೆ ದಾಳಿ ಮಾಡಲಾಗಿದೆ. ಈ ಐಟಿ ದಾಳಿ ಮೆಡಿಕಲ್ ಶಾಪ್ನಲ್ಲಿ ಸ್ಯಾಂಪಲ್ ತೆಗೆದುಕೊಂಡಂತೆ ಅಂತಾ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವ್ಯಂಗ್ಯವಾಡಿದ್ದಾರೆ.
ಅನಂತಕುಮಾರ ಹೆಗಡೆ ಆಪ್ತರ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದಲ್ಲಿ ಮಾತನಾಡಿದ ಅವರು, ಐಟಿ ಇಲಾಖೆ ಕೇಂದ್ರ ಸರ್ಕಾರ ಹಿಡಿತದಲ್ಲಿದೆ. ಅವರು ಹೇಳಿದಂತೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಸಿಕ್ಕಿರುವ ₹81 ಲಕ್ಷ ಹಣಕ್ಕೆ ದಾಖಲೆ ನೀಡಿದರೆ ಪಾರಾಗುತ್ತಾರೆ. ಬಿಜೆಪಿಯವರಿಗೆ ಮೊದಲೇ ಮಾಹಿತಿ ನೀಡಿ ದಾಳಿ ಮಾಡಲಾಗಿದೆ.
ಐಟಿ, ಸಿಬಿಐ ದಾಳಿ ಚುನಾವಣೆ ಸಂದರ್ಭದಲ್ಲಿ ಮಾಡಬಾರದು. ಅಕ್ರಮ ಹಣ ಸಾಗಾಟ ಕಂಡು ಬಂದಲ್ಲಿ ದಾಳಿ ಮಾಡಿ, ನಂತರ ಪ್ರಕರಣ ದಾಖಲಿಸಬೇಕು ಅಂತಾ ಹೇಳಿದ್ರು. ಇದೇ ವೇಳೆ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಸಬೇಕು ಅಂತಾ ಐಟಿ ದಾಳಿ ಮಾಡಲಾಗಿತ್ತು ಅಂತಾ ಹೇಳಿದರು.