ಕುಮಟಾ :ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಪರ ಪ್ರಚಾರ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮವನ್ನ ಉಳಿಸುವವನು ನಾನೇ ಎಂದು ಹೇಳುವ ವ್ಯಕ್ತಿ ಅನಂತಕುಮಾರ್ ,ದೇವಸ್ಥಾನಕ್ಕೆ ಹೋದಾಗ ನಿಂಬೆಹಣ್ಣು ಕೊಡುತ್ತಾರೆ ಎಂದರು.
18ರ ನಂತರ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳುತ್ತಿದ್ದಾರೆ,ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸುತ್ತಾನೆ.ಈಗ ಎಲ್ಲಿದೀಯಪ್ಪಾ ಆನಂದ್ ಅಂತಾ ಟ್ರೋಲ್ ಮಾಡ್ತಿದ್ದಾರೆ,
ಚುನಾವಣೆ ಮುಗಿದ ಬಳಿಕ ಇವರೆಲ್ಲಾ ಎಲ್ಲಿರ್ತಾರೆ ನೋಡಬೇಕು ಎಂದು ಟಾಂಗ್ ನೀಡಿದ್ರು.
ಬಿಜೆಪಿಯವರು ಮೋದಿ ಫೋಟೋ ಇಟ್ಟುಕೊಂಡು ಮತ ಕೇಳಲು ಹೋಗಬೇಕು,ಕಳೆದೆರಡು ತಿಂಗಳಿನಿಂದ ನರೇಂದ್ರ ಮೋದಿಯನ್ನೇ ಮಾಧ್ಯಮಗಳು ಮರೆಸಿದ್ದಾರೆ ಎಂದರು.
ಇನ್ನುಮಾಧ್ಯಮಗಳಲ್ಲಿ ಕೇವಲ ಸುಮಲತಾ, ಮಂಡ್ಯವನ್ನ ಮಾತ್ರ ತೋರಿಸುತ್ತಿದ್ದಾರೆ,ಹೀಗಾಗಿ ಮಾಧ್ಯಮಗಳಲ್ಲಿ ನರೇಂದ್ರ ಮೋದಿ ಕಳೆದುಹೋಗಿದ್ದಾರೆ.
೨೩ರ ನಂತರ ಎಲ್ಲಿದ್ದೀಯಪ್ಪಾ ಅನಂತಕುಮಾರ ಅಂತಾ ಕೇಳಬೇಕಾಗತ್ತೆ ಎಂದು ಅನಂತಕುಮಾರ್ ಹೇಳಿಕೆಗೆ ಟಾಂಗ್ ನೀಡದ್ರು.