ಮೇಷ:- ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲವು ವಿಚಾರಗಳಲ್ಲಿ ಮನೆಯ ಸದಸ್ಯರ ಸಲಹೆ ಪಡೆದು ಮುಂದುವರಿಯುವುದು ಒಳ್ಳೆಯದು. ಸಮಾಜದಲ್ಲಿ ಸನ್ಮಾನಗಳು ದೊರೆಯುವವು.
ವೃಷಭ:- ಎಲ್ಲದಕ್ಕೂ ಧಾವಂತ ಮಾಡುವುದರಿಂದ ಅಮೂಲ್ಯ ವಿಚಾರಗಳನ್ನು ಕಳೆದುಕೊಳ್ಳುವಿರಿ. ಕೂತು ಮಲಗುವ ವ್ಯವಧಾನ ಇಟ್ಟುಕೊಂಡಲ್ಲಿ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆತುರದಿಂದ ಕಾರ್ಯ ಹಾನಿ ಆಗುವುದು.
ಮಿಥುನ:- ದೃಢ ಮನಸ್ಕರಾದ ನಿಮಗೆ ನಿಮ್ಮದೇ ಆದ ದಾರಿ ಸ್ಪಷ್ಟವಿರುವಾಗ ಮನಸ್ಸಿನ ಹೊಯ್ದಾಟಗಳಿಗೆ ದಾರಿ ಮಾಡಿಕೊಡದಿರಿ. ನೀವು ಇಚ್ಛಿಸಿದಂತೆ ಕೆಲಸಗಾರರು ನಿಮಗೆ ಸಹಾಯ ಮಾಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಕಟಕ:- ಯಾವುದೋ ಮಾತಿನ ಭರದಲ್ಲಿ ನಿಮ್ಮ ಸ್ನೇಹಿತರಿಗೆ ಆಡಿದ ಮಾತಿನಿಂದ ಆತನು ನಿಮ್ಮಿಂದ ವಿಮುಖನಾಗಿರುವನು. ಈ ಬಗ್ಗೆ ಆತನೊಟ್ಟಿಗೆ ಮಾತನಾಡಿ ಇದ್ದ ವಿಷಯವನ್ನು ತಿಳಿಸಿ. ನಿಮ್ಮ ಮೇಲಿನ ತಪ್ಪು ಭಾವನೆಯನ್ನು ಹೋಗಲಾಡಿಸಿಕೊಳ್ಳಿ.
ಸಿಂಹ:- ಸತ್ಯವಾದುದು ಯಾವಾಗಲೂ ಕಠೋರವಾಗಿರುತ್ತದೆ. ಅದು ನಿಮ್ಮ ಗೌರವ ಘನತೆಯನ್ನು ಎತ್ತಿಹಿಡಿಯುವುದು ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಹಿರಿಯರನ್ನು ಗೌರವಿಸಿ ಹಿರಿತನದಿಂದ ಬಾಳಿ.
ಕನ್ಯಾ:- ನೀವು ಮಾಡಬೇಕಾಗಿರುವ ಕಾರ್ಯದ ರೂಪರೇಷೆಯನ್ನು ನಿಮ್ಮ ಸಹೋದ್ಯೋಗಿಯೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಕಾರ್ಯ ಸುಲಭವಾಗಿ ಆಗುವುದು. ಆತನು ನಿಮಗೆ ಪೂರಕವಾದ ಸಲಹೆ ಸಹಕಾರಗಳನ್ನು ನೀಡುವರು.
ತುಲಾ:- ಭಗವಂತನ ಸೃಷ್ಟಿಯಲ್ಲಿ ಯಾವುದೂ ಉಪಯೋಗಕ್ಕೆ ಬರುವುದಿಲ್ಲ ಎಂಬ ಭಾವನೆ ತರವಲ್ಲ. ಸಮಯ ಬಂದರೆ ಸಣ್ಣ ಹುಲ್ಲುಕಡ್ಡಿಯಿಂದಲೂ ಸಹಾಯ ದೊರೆಯುವುದು. ಹಾಗಾಗಿ ಯಾರನ್ನು ದೂರ ಮಾಡಿಕೊಳ್ಳದಿರಿ.
ವೃಶ್ಚಿಕ:- ಎಷ್ಟೇ ತಾಳ್ಮೆಯಿಂದ ಇರಲು ಪ್ರಯತ್ನಿಸಿದರೂ ಈ ದಿನದ ಸನ್ನಿವೇಶ ನಿಮ್ಮನ್ನು ಕೆರಳುವಂತೆ ಮಾಡುವುದು. ವಿನಾಕಾರಣ ಮನೆ ಸದಸ್ಯರ ಮೇಲೆ ಅಸಹನೆ, ಕೋಪ ಕೂಗಾಟಗಳನ್ನು ಮಾಡದಿರಿ. ಕುಲದೇವರನ್ನು ಮನಸಾ ಸ್ಮರಿಸಿ.
ಧನುಸ್ಸು:-ಎಲ್ಲಾ ಕಾರ್ಯಗಳು ಸುಗಮವಾಗಿ ಆಗುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಬಂಧು ಬಾಂಧವರು ಮನೆಗೆ ಬರುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡುವುದು.
ಮಕರ:- ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರುವುದು. ಹೊಸ ಕೆಲಸದ ಕಾರ್ಯ ಯೋಜನೆ ನೀವು ತಿಳಿದಷ್ಟು ಸುಲಭವಾಗಿರುವುದಿಲ್ಲ. ಹಾಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.
ಕುಂಭ:- ಅನವಶ್ಯಕವಾಗಿ ಕೆಲವರನ್ನು ಹೆಗಲಿಗೇರಿಸಿಕೊಳ್ಳುವ ಅಚಾತುರ್ಯ ಖಂಡಿತ ಬೇಡ. ಅಪರಿಚಿತರೊಡನೆ ಸಲುಗೆ ಬೇಡ. ಹಣಕಾಸು ಸಕಾಲದಲ್ಲಿ ಬರುವುದರಿಂದ ಒಳಿತಾಗುವುದು.
ಮೀನ:- ಅಂತರಂಗ, ಬಹಿರಂಗಗಳೆರಡನ್ನೂ ಗ್ರಹಿಸಿ ಕೆಲವು ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಇದರಿಂದ ಉತ್ಕರ್ಷಕ್ಕೆ ದಾರಿ ಉಂಟಾಗುವುದು. ಮನೆಯ ಸದಸ್ಯರೊಡನೆ ಸೌಹಾರ್ದತೆಯಿಂದ ಇರುವುದು ಒಳ್ಳೆಯದು.