ಹೊನ್ನಾವರ: ಉತ್ತರ ಕನ್ನಡದಲ್ಲಿ ಚುನಾವಣಾ ಕಾವು ಏರುತ್ತಿದೆ. ಬಿ.ಜೆ.ಪಿಯಿಂದ ಅನಂತ ಕುಮಾರ್ ಹೆಗಡೆ ಸ್ಪರ್ಧೆಯಲ್ಲಿದ್ದರೆ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ಅಸ್ನೋಟಿಕರ್ ಕಣದಲ್ಲಿದ್ದಾರೆ.
ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಪ್ರಚಾರ ನಡೆಸಲು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಉತ್ತರಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.
ಅವರು ಏಪ್ರೀಲ್ 21ರಂದು ಶಿವಮೊಗ್ಗದಿಂದ ಬೆಳಿಗ್ಗೆ 10;30ಕ್ಕೆ ಭಟ್ಕಳಕ್ಕೆ ಆಗಮಿಸಲಿದ್ದು ಪ್ರಚಾರ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದು 3 ಗಂಟೆಗೆ ಬೆಂಗಳೂರಿಗೆ ವಾಪಸ್ಸ್ ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕುಮಾರ ಸ್ವಾಮಿ ಪ್ರಚಾರದ ಜೊತೆಗೆ ಈಗ ದೇವೇಗೌಡರ ಪ್ರಚಾರ ಕಾರ್ಯವೂ ಉತ್ತರ ಕನ್ನಡದಲ್ಲಿ ಕುತೂಹಲ ಮೂಡಿಸಿದೆ.