ಈಸ್ವರ್ ಹಬ್ಬದ ಪ್ರಯುಕ್ತ ತ್ರಿದುಮ್” ಆಚರಣೆಯ ಎರಡನೇ ದಿನವಾದ “ಗುಡಫ್ರೈಡ” ಸಂಭ್ರಮವನ್ನು ಭಕ್ತಿ ಹಾಗೂ ಗೌರವಾದರಗಳಿಂದ ನಗರದ ಕ್ಯಥೆಡ್ರಲ್ ಚರ್ಚಿನಲ್ಲಿ ಆಚರಿಸಲಾಯಿತು.
ಮಧ್ಯಾಹ್ನ 3 ಘಂಟೆಗೆ ಧರ್ಮಾದ್ಯಕ್ಷರಾದ ಅ.ವಂ.ಡಾ.ಡೆರಿಕ್ ಫೆರ್ನಾಂಡಿಸರವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು. ಧರ್ಮಾದ್ಯಕ್ಷರು-ಸಹ ಯಾಜಕರೊಂದಿಗೆ ಬಲಿಪೀಠದ ಮುಂಭಾಗದಲ್ಲಿ ಸಾಪ್ಟಾಂಗ ಎರಗಿ ಪ್ರಭುಕ್ರಿಸ್ತನ ಶಿಲುಬೆಯ ಮರಣವನ್ನು ಧ್ಯಾನಿಸಿ ಪ್ರಾರ್ಥಿಸಿದರು.ನಂತರ ಪವಿತ್ರ ಬೈಬಲಿನ ಪಠಣ ನಡೆಯಿತು. ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸ್ವಾನಿಪಿಂಟೊರವರು “ಪವಿತ್ರ ಶಿಲುಬೆಯ ನಮ್ಮ ಜೀವನಕ್ಕೆ ದಾರಿ ದೀಪ” ಎನ್ನುವ ವಿಷಯದ ಮೇಲೆ ಬೋಧನೆ ನೀಡಿದರು.
ವಿವಿಧ ಉದ್ದೇಶಗಳಿಗಾಗಿ ವಿಶೇಷವಾಗಿ ಭಾರತದೇಶಕ್ಕಾಗಿ ಧರ್ಮಧ್ಯಕ್ಷರು ಪ್ರಾರ್ಥಿಸಿದರು. ಪವಿತ್ರ ಶಿಲುಬೆಯನ್ನು ಭಕ್ತಿಪೂರ್ವಕವಾಗಿ ನಮಿಸಿ, ಎಲ್ಲರೂ ಗೌರವ ಸಲ್ಲಿಸಿದರು ವಿಚಾರಣಾ ಗುರುಗಳಾದ ಲಾರೆನ್ಡಾ ಡಿಸೋಜಾ, ವಿಲ್ಲೆಟ್ ಫೆರ್ನಾಂಡಿಸ್, ಜೋನವಿಲ್ಸನ್,ಜಸ್ಟಿನ್ ಡಿಸೋಜಾರವರು ಸಹಯೊಯಾಜಕರಾಗಿ ಭಾಗವಹಿಸಿದರು.