ಅಂಕೋಲಾ : ತಾಲೂಕಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳುವ ಕಾರಣಕ್ಕಾಗಿ ಇಂದು ಚಿತ್ರನಟಿ ಹಾಗೂ ಭಾರತೀಯ ಜನತಾ ಪಕ್ಷದ ಪ್ರಮುಖರಾದ ಶ್ರೀಮತಿ ತಾರಾರವರು ಆಗಮಿಸಿದ್ದು ಮಾರ್ಗಮದ್ಯೆ ಕಾರವಾರ ನಗರದ ಕೆಲವು ಅಂಗಡಿಗಳಿಗೆ ತೆರಳಿ ಪಕ್ಷದ ಅಭ್ಯರ್ಥಿಯಾದ ಶ್ರೀ ಅನಂತಕುಮಾರ ಹೆಗಡೆ ರವರ ಪರವಾಗಿ ಮತಯಾಚನೆ ನಡೆಸಿದರು.
ಮಾದ್ಯಮದವರೊಂದಿಗೆ ಮಾತನಾಡಿ ತಮಗೆ ಸವಾಲೆಸೆದವರು ಬಾಯಿ ಮುಚ್ಚುವ ರೀತಿಯಲ್ಲಿ ಅನಂತಕುಮಾರ ಹೆಗಡೆ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲಿಯೂ ತೋರಿಕೆಯ ಕೆಲಸಮಾಡಿ ಹೋದವರಲ್ಲ ಅವರ ಕೆಲಸ ಕಾರ್ಯಗಳ ಸಾಧನೆಗಳ ಕೈಪಿಡಿಯನ್ನು ನೀಡಿ ನಾವು ಮತಯಾಚನೆ ನಡೆಸುತ್ತಿದ್ದೇವೆ ಎಂದರು.
RELATED ARTICLES ಗುಜರಾತ್ ನಲ್ಲಿ ಮತ್ತೆ ಬಿಜೆಪಿ !! ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಛಿದ್ರ ಸಮೀಕ್ಷೆಯಿಂದ ಬಹಿರಂಗ
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ರವರು ಹಾಗೂ ಇನ್ನಿತರರು ಹಾಜರಿದ್ದರು.