ಶಿರಸಿ:– ಕೇಂದ್ರ ಸಚಿವ ಹಾಗೂ ಕೆನರಾ ಲೋಕಸಭಾ ಸಂಸದ ಹಾಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆಯವರಿಗೆ ಮತ್ತೊಮ್ಮೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.
ಈ ಕುರಿತು ಅವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಶನಿವಾರ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಶೆಟ್ಟಿ ಪೋಲಿಸರಿಗೆ ನಿಡೀದ ದೂರಿನಲ್ಲಿ ನೀನು ಎಷ್ಟು ದಿನ ಅಂತಾ ಪೋಲಿಸರ ರಕ್ಷಣೆಯಲ್ಲಿ ತಿರುಗಾಡುತ್ತಿಯಾ,ನಿನ್ನನ್ನು ಮರ್ಡರ್ ಮಾಡಿಯೇ ಮಾಡುತ್ತೇವೆಂದು ಜೀವ ಬೆದರಿಕೆ ಹಾಕಿದ್ದಾರೆಂದು ವಿವರಿಸಲಾಗಿದೆ.
ಶಿರಸಿ ಮಾರ್ಕೆಟ್ ಠಾಣೆಯ ಪಿಎಸ್ಆಯ್ ಶಿವಕುಮಾರ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ಕೇಂದ್ರ ಸಚಿವರಿಗೆ ಈ ರೀತಿ ಮೇಲಿಂದ ಮೇಲೆ ಬೆದರಿಕೆ ಕರೆ ಬರುತ್ತಿರುವುದು ಪೋಲಿಸರಿಗೂ ತಲೆ ಬಿಸಿಯಾಗಿ ಪರಿಣಮಿಸಿದ್ದು ಆದಷ್ಟು ಬೇಗಾ ಆರೋಪಿಯನ್ನು ಹಿಡಿಯುವ ವಿಶ್ವಾಸ ಪೋಲಿಸರು ವ್ಯಕ್ತ ಪಡಿಸಿದ್ದಾರೆ.
ಘಟನೆ ಏನು?
ಬೆಳಗಿನ ಜಾವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮನೆಯ ಸ್ಥಿರ ದೂರವಾಣಿ ಸಂಖ್ಯೆಗೆ 022330000 ಎಂಬ ಇಂಟರ್ ನೆಟ್ ನಂಬರ್ ನಿಂದ ಕರೆ ಬಂದಿದ್ದು ಕರೆಯನ್ನು ಅನಂತಕುಮಾರ್ ಹೆಗಡೆ ಪತ್ನಿ ಶ್ರೀ ರೂಪ ಸ್ವೀಕರಿಸಿದ್ದು ಈ ವೇಳೆ ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ ಎಲ್ಲಿ ನಿನ್ನ ಗಂಡ ಅವನನ್ನು ಬಿಡುವುದಿಲ್ಲ ಮುಗಿಸುತೇವೆ ,ಇವತ್ತು ಮನೆಯಲ್ಲಿ ಇರಬೇಕಿತ್ತು ಎಲ್ಲಿ ಅಡಗಿ ಕುಳಿತಿದ್ದಾರೆ,ಮೊಬೈಲ್ ಪೋನ್ ಮಾಡಿದ್ರೆ ಸ್ವೀಕರಿಸುತ್ತಿಲ್ಲ,ಒಂದುಸಲು ತಪ್ಪಿಸಿಕೊಂಡ ಮಾತ್ರಕ್ಕೆ ನಮ್ಮ ಕೈನಿಂದ ಪ್ರತಿಬಾರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅವರನ್ನು ಮುಗಿಸದೇ ಬಿಡುವುದಿಲ್ಲ, ಪೊಲೀಸ್ ಭದ್ರತೆಯಲ್ಲಿ ಎಷ್ಡು ದಿನ ತಿರುಗುತ್ತಾರೆಂದು ನಾವು ನೋಡುತ್ತೇವೆ,ಯಾವ ಪೊಲೀಸ್ ನಾಯಿಗೆ ಹೇಳುತ್ತೀರೋ ಹೇಳಿಕೊಳ್ಳಿ,ನಿಮ್ಮನ್ನು ಹಾಗೂ ಭದ್ರತಾ ಸಿಬ್ಬಂದಿ ಗಳನ್ನು ಬಿಡುವುದಿಲ್ಲ, ಎಲ್ಲರನ್ನೂ ಮುಗಿಸುತ್ತೇವೆ ಎಂದು ಅಶ್ಲೀಲ ಶಬ್ದಗಳಿಂದ ಮಾತನಾಡಿದ್ದು ಈ ವೇಳೆ ಅನಂತಕುಮಾರ ಹೆಗಡೆ ಬೇರೊಂದು ಕರೆಯಲ್ಲಿದ್ದು ಬೆದರಿಕೆ ಕರೆ ಎಂದು ತಿಳಿದ ತಕ್ಷಣ ಆತನ ದ್ವನಿಯನ್ನು ಪೊಲೀಸ್ ಸಿಬ್ಬಂದಿಗಳಿಗೆ ಕೇಳಿಸಿದ್ದಾಗಿ ಆಪ್ತ ಕಾರ್ಯದರ್ಶಿ ಸುರೇಶ್ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.