ಹೊನ್ನಾವರ: ತಾಲೂಕಿನಲ್ಲಿ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರ ಮಾಜಿ ಪ್ರಧಾನಿ ದೇವೆಗೌಡರು ಅಬ್ಬರದ ಪ್ರಚಾರ ಮಾಡಿದ್ದಾರೆ.

ನನ್ನ ಅನುಭವ ಹಾಗೂ ಮಾರ್ಗದರ್ಶನ ದೇಶಕ್ಕೆ ಬೇಕೆಂಬ ನಿಟ್ಟಿನಲ್ಲಿ ಸೋನಿಯಾ ಗಾಂಧಿಯವರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದರು.

ನಾನು ಕೂಡ ಹಿಂದೂ ಧರ್ಮದವನೇ. ನಾನೂ ಎಲ್ಲಾ ದೇವಸ್ಥಾನಕ್ಕೆ ಹೋಗುತ್ತೇನೆ. ಕಾನೂನು ಬದಲಾವಣೆ ಮಾಡುವವರನ್ನ ನಾವು ಗೆಲ್ಲಿಸಬೇಕಾ.? ಎಂದು ಅನಂತಕುಮಾರ ಹೆಗಡೆ ವಿರುದ್ದ ವಾಗ್ದಾಳಿ ನಡೆಸಿದರು.

RELATED ARTICLES  ಕಾಂಗ್ರೆಸ್ ಪಕ್ಷದಿಂದ "ಮನೆ ಮನೆಗೆ ಕಾಂಗ್ರೆಸ್" ಯೋಜನೆ ಅಡಿಯಲ್ಲಿ ಜನತೆಗೆ ಪಕ್ಷದ ಸಾಧನೆ ತಿಳಿಸುವ ಕಾರ್ಯ

ಮೋದಿ ಅವರು ಇಂಥವರನ್ನ ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡಿದ್ದಾರೆ‌. ರೈತರ ಸಮಸ್ಯೆ ತೆಗೆದುಕೊಂಡು ಮೋದಿ ಬಳಿ ಹೋದ್ರೆ ಅವರ ಬಳಿ ಉತ್ತರವಿಲ್ಲ. ನಾನು ಪಾಕಿಸ್ತಾನಕ್ಕೆ ಐದು ಬಾರಿ ಹೋಗಿದ್ದೆ‌, ಯಾರೂ ನನಗೆ ಹೊಡೆದಿಲ್ಲ. ಏಳಿ ಎದ್ದೇಳಿ ನಮಗೂ ಶಕ್ತಿ ಇದೆ, ಸಂವಿಧಾನ ಬದಲಾವಣೆಗೆ ಅವಕಾಶ ನೀಡೋದಿಲ್ಲ ಎಂದ ಅವರು ಉತ್ತರ ಕನ್ನಡದಲ್ಲಿ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶ್ರೀ ವೀರಭದ್ರೇಶ್ವರ ಸ್ವಾಮಿಗಳು.