ಕುಮಟಾ: ತಾಲೂಕಿನ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಸತ್ಸಂಗ ಭವನದಲ್ಲಿ ಮೇ.1 ರಿಂದ 10 ದಿನಗಳ ಕಾಲ ಸಂಗೀತ ಶಿಬಿರ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಎಚ್.ಎನ್.ಅಂಬಿಗ ತಿಳಿಸಿದ್ದಾರೆ.

ಪ್ರಾಥಮಿಕ ಸ್ತರದ ವಿದ್ಯಾರ್ಥಿಗಳು ಭಾಗವಹಿಸಬಹುದಾದ ಈ ಶಿಬಿರದಲ್ಲಿ ಗಾಯನ, ವಾದನ ಹಾಗೂ ತಬಲಾ ಶಿಕ್ಷಣದೊಂದಿಗೆ ಸುಭಾಷಿತ, ಸ್ತೋತ್ರ, ದೇಶಭಕ್ತಿಗೀತೆ ಮುಂತಾದವುಗಳನ್ನು ಕಲಿಸಲಾಗುವುದು. ಪ್ರತಿದಿನ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ದೂರದಿಂದ ಬರುವ 5 ಶಿಬಿರಾರ್ಥಿಗಳಿಗೆ ವಸತಿ-ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ. ಡಾ ಕೆ ಗಣಪತಿ ಭಟ್ಟ, ಸುಧಾ ಆಚಾರಿ, ನಾಗರಾಜ ದೀಕ್ಷಿತ ಹಾಗೂ ರೋಹಿಣಿ ಭಟ್ಟ ಶಿಬಿರಾರ್ಥಿಗಳಿಗೆ ಬೋಧಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08386-264161, 9448232435 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

RELATED ARTICLES  ಸ್ವ ಇಚ್ಚೆಯಿಂದ ಕೆರೆ ಸ್ವಚ್ಛಗೊಳಿಸಿದ ಪುಟಾಣಿಗಳು : ಬಾಡದ ಈ ಹುಡುಗರೇ ಎಲ್ಲರಿಗೂ ಮಾದರಿ!