ಕುಮಟಾ: ಮತ ಚಲಾವಣೆಗೆ ಮಹಿಳೆಯರನ್ನುಸೆಳೆಯುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯತ್ನ ನಡೆದಿದೆ ಅದರಲ್ಲಿ ನೀಲಿ ಮತಗಟ್ಟೆಯೂ ಒಂದು.ಕುಮಟಾದಲ್ಲಿಯೂ ಈ ವಿದದ ಮತಗಟ್ಟೆಗಳು ಜನರನ್ನು ಆಕರ್ಶಿಸಿದೆ.
ಅಲ್ಲಲ್ಲಿ ಹಚ್ಚ ಹಸಿರು ಗಿಡಗಳ ಪಾಟ್‌ಗಳು, ಬಣ್ಣದ ಬಲೂನ್‌ಗಳು ಇಡೀ ಮತಗಟ್ಟೆಯನ್ನು ಆಕರ್ಷಕಗೊಳಿಸಿವೆ.ಮತಗಟ್ಟೆ ಅಂಗಳದಲ್ಲಿ ಮತದಾರರನ್ನು ಸ್ವಾಗತಿಸುವ ಬ್ಯಾನರ್‌ಗಳು, ಶಾಮಿಯಾನ, ಸಾಲಾಗಿ ಇಟ್ಟ ಕುರ್ಚಿಗಳು, ನೀಲಿ, ಬಿಳಿ, ಪಿಂಕ್, ಗ್ರೇ ಕಲರ್ ಹೊಸ ಸೀರೆಯುಟ್ಟು ಮಹಿಳಾ ಮತದಾರರನ್ನು ಆತ್ಮೀಯವಾಗಿ ಸ್ಪಂದಿಸುವ ಮತಗಟ್ಟೆ ಸಿಬ್ಬಂದಿಗಳಿಂದ ಈ ಸ್ಥಳ ತುಂಬಿತ್ತು.
ತಾಲೂಕಿನ ನಗರಸಭಾ ವ್ಯಾಪ್ತಿಯ ವಿವೇಕನಗರ ಮಹಿಳಾ ವಿಶೇಷ ನೀಲಿಬೂತ್ ನಲ್ಲಿ ಮುಂಜಾನೆಯಿಂದಲೇ ಮತದಾರರು ಸರದಿಸಾಲಿನಲ್ಲಿ ನಿಂತು ಮತದಾನದಲ್ಲಿ ಭಾಗವಹಿಸಿರುವುದು ಕಂಡು ಬಂತು ವಿಶೇಷವಾಗಿ ಯುವಜನತೆಯು ಮತದಾನದಲ್ಲಿ ಉತ್ಸುಕತೆ ತೋರಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಇಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಂಜೆ ಏಳರ ತನಕವೂ ಮತದಾನ ನೆಡೆದಿತ್ತು.