ಕಾರವಾರ: ನಗರದ ದಿವೇಕರ್ ಕಾಲೇಜು ಎದುರಿನ ಮತಗಟ್ಟೆಯ ಬಳಿ ಜೆಡಿಎಸ್ ನ ಕಾರ್ಯಕರ್ತ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ತದ ನಂತರ ಈ‌ ಘಟನೆ ತನ್ನ ದಿಕ್ಕನ್ನೇ ಬದಲಿಸಿಕೊಂಡು ಇದೀಗ ಸುದ್ದಿಯಾಗಿದೆ.

    ಸರ್ವೋದಯ ನಗರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಸ್ಥಳಕ್ಕಾಗಮಿಸಿದ ಶಾಸಕಿ ರೂಪಾಲಿ ನಾಯ್ಕ ಜೆಡಿಎಸ್ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಆ ಪಕ್ಷ, ಈ ಪಕ್ಷ ಅಂತ ದುಡ್ಡು ತಿನ್ನೋರು ನೀವು. ಪಕ್ಷದಲ್ಲಿ ನಿಯತ್ ಇಲ್ವಾ. ಊರು ಹಾಳು ಮಾಡೋಕೆ ಬಂದಿದ್ದೀರಿ. ಒಂದು ವರ್ಷ ಗೂಂಡಾಗಿರಿ ಕಡಿಮೆಯಾಗಿತ್ತು. ಮತ್ತೆ ಸ್ಟಾರ್ಟ್ ಆಯ್ತಾ? ಆನಂದ ಅಸ್ನೋಟಿಕರ್ ರೌಡಿಸಂ ಮಾಡಿಸುತ್ತಿದ್ದಾರೆ. 10 ಲಕ್ಷ ತಿಂದಿದ್ದೀರಾ, ನಿನ್ನ ತಂದೆ ಒಂದ್ ಪಕ್ಷ, ತಾಯಿ ಒಂದ್ ಪಕ್ಷ. ನಂಗೆ ಹೇಳುತ್ತೀಯಾ? ಆನಂದ ಅಸ್ನೋಟಿಕರ್ ಈಗಲೇ ಕತ್ತಿ ಕೊಟ್ಟಿದ್ದಾನಾ? ಮರ್ಯಾದೆ ಕಾಣೋದಿಲ್ಲಾ.  ಎಂದು ಶಾಸಕಿ ರೂಪಾಲಿ ನಾಯ್ಕ ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ರೇಗಾಡಿದ್ದಾರೆ  ಎನ್ನಲಾಗಿದೆ.

RELATED ARTICLES  ಮಗು ಆಟವಾಡುವಾಗ ನಡೆದ ಅವಘಡ : ಹಾರಿತು ತಾಯಿಯ ಪ್ರಾಣಪಕ್ಷಿ.