ಶಿರಸಿ: ತಾಲೂಕಿನಲ್ಲಿ ಅಕಾಲಿಕವಾಗಿ ವರುಣನ ಅಬ್ಬರ ಜೋರಾಗಿದ್ದು, ಭಾರೀ ಮಳೆಯಿಂದಾಗಿ ಮತದಾನಕ್ಕೆ ಅಡ್ಡಿಯಾಗಿದೆ.

ಶಿರಸಿಯ ಹಲವೆಡೆ ಗಾಳಿ, ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಮತ ಚಲಾಯಿಸಲು ಬಂದ ಮತದಾರರಿಗೆ ತೊಂದರೆಯಾಗಿದೆ.

RELATED ARTICLES  ಸಿಎಸ್ ಪರೀಕ್ಷೆಯಲ್ಲಿ ಸೂರ್ಯನಾರಾಯಣ ಉತ್ತೀರ್ಣ

ಗುಡುಗು ಸಹಿತ ಭಾರೀ ಮಳೆ ಪ್ರಾರಂಭವಾಗಿದ್ದು, ಮಳೆಯ ಅಬ್ಬರಕ್ಕೆ ಐದಕ್ಕೂ ಹೆಚ್ಚು ಮರಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರಕ್ಕೆ ಮತದಾರರು ಮತಗಟ್ಟೆಗೆ ಬರುತ್ತಿಲ್ಲ. ಮಳೆಯಿಂದ ಮತದಾನ ಇಳಿಮುಖವಾಗಿದೆ. ಒಂದು ಕಡೆ ಮಳೆಯಾದರೆ, ಮತ್ತೊಂಡೆ ಮಳೆಯ ಅಬ್ಬರಕ್ಕೆ ಶಿರಸಿ ನಗರದಲ್ಲಿ ಪವರ್ ಕಟ್ ಆಗಿದೆ. ಮತಗಟ್ಟೆಯ ಕೊಠಡಿಗಳಲ್ಲಿ ಕತ್ತಲು ಆವರಿಸಿದೆ. ಇದರಿಂದ ಮತದಾರರು ಮತದಾನಕ್ಕೆ ಬರದೇ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕ ಇಳಿಮುಖವಾದ ಬಗ್ಗೆ ವರದಿಯಾಗಿದೆ.

RELATED ARTICLES  ಸೈನಿಕರ ಕುಟುಂಬಕ್ಕೆ ಉಚಿತವಾಗಿ ಚಿಕಿತ್ಸೆ ನೀಡುವ ವೈದ್ಯ: ಶಿರಸಿಯಲ್ಲಿ ಯೋಧರಿಗೆ ಸಲ್ಲುತ್ತಿದೆ ವಿಶೇಷ ಗೌರವ