ಕುಮಟಾ: ತಾಲೂಕಿನ ದೀವಗಿಯ ನವಗ್ರಾಮ ನೀರಿಗೆ ಬರವಿರುವ ಪ್ರದೇಶ.ಇಲ್ಲಿ ಗ್ರಾಮ ಪಂಚಾಯತಿಯಿಂದ ಪೂರೈಕೆಯಾಗುವ ನೀರಿಗಾಗಿಯೇ ಕಾಯಬೇಕಾದ ಪರಿಸ್ಥಿತಿ ಇದೆ.ಒಂದು ದಿನ ನೀರು ಪೂರೈಕೆಯಾಗದೆ ಹೋದರೆ ನೀರಿಗಾಗಿ ಹಾಹಾಕಾರ ತಲೆದೋರುತ್ತದೆ.
ಅಂತಹ ಒಂದು ಗುಡ್ಡಗಾಡು ಪ್ರದೇಶ.ಅದರಲ್ಲಿಯೂ ಬೇಸಿಗೆ ಬಂತೆಂದರೆ ನೀರಿಗಾಗಿ ಪರದಾಡುವ ಇಲ್ಲಿನ ಪರಿಸ್ಥಿತಿ ಹೇಳತೀರದು.ಜೊತೆಗೆ ಪೂರೈಕೆಯಾಗುವ ನೀರಿನ ಪ್ರಮಾಣವೂ ಕಡಿಮೆ.
ಆದರೆ ಚುನಾವಣೆಯ ದಿನದಂದು ನೀರಿನ ಪೂರೈಕೆ ಆಗದೆ ಜನ ನೀರಿನ ಪರ್ಯಾಯ ವ್ಯವಸ್ಥೆಗಾಗಿ ಪರದಾಡುತ್ತಿರುವ ದೃಶ್ಯ ಕಂಡುಬಂತು.ವಾಟರ್ ಮನ್ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಕಾರಣ,ಬದಲಿ ವ್ಯವಸ್ಥೆ ಇಲ್ಲದೆ ನೀರು ಪೂರೈಕೆ ಸ್ಥಗಿತಗೊಂಡಿತ್ತು.ಆದರೆ ಜನ ಎನು ಮಾಡ್ಬೇಕು ಸ್ವಾಮಿ?ಕುಡಿಯಲು ನೀರಿಲ್ಲದೆ ಹೇಗಿರಲು ಸಾದ್ಯ? ಅನೇಕ ಬಾರಿ ಗ್ರಾಮ ಪಂಚಾಯತ ಬೇಜವಾಬ್ದಾರಿಯಿಂದ ಜನ ಸಮಸ್ಯೆಗಳನ್ನು ಅನುಭವಿಸುತ್ತಲೆ ಬಂದಿದ್ದಾರೆ.ಚುನಾವಣಾ ಪ್ರಚಾರಕ್ಕೆ ಬರುವ ಅಭ್ಯರ್ಥಿಗಳು,ಕಾರ್ಯಕರ್ತರು ಪ್ರಚಾರಕ್ಕೆ ಬರುವಾಗ ನಿಮಗೆ ತೊಂದರೆಯಾಗದ ರೀತಿಯಲ್ಲಿ ನೀರಿನ ಪೂರೈಕೆ ಮಾಡುತ್ತೇವೆಂದು ಪೊಳ್ಳು ಭರವಸೆಗಳ ಸುರಿಮಳೆ ಗೈಯುತ್ತಾರೆ.ಆದರೆ ವಾಸ್ತವದಲ್ಲಿ ಇಲ್ಲಿನ ಸಮಸ್ಯೆಗೆ ಸ್ಪಂದಿಸುವ ರೀತಿಯೇ ಬೇರೆ.ಈದೀಗ ಇಂತಹ ಸುಳ್ಳು ಭರವಸೆಯ ನಾಯಕರಿಗೆ ಹಿಡಿಶಾಪ ಹಾಕುವ ಪರಿಸ್ಥಿತಿ ಇಲ್ಲಿನ ಜನತೆಯಾದ್ದಾಗಿದೆ.
ಇನ್ನು ಮುಂದೆಯಾದರೂ ಜನಪ್ರತಿನಿಧಿಯಾಗಿ ಬರುವವರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸಮಸ್ಯೆ ಬಗೆಹರಿಸುತ್ತಾರೆಂದು ಕಾದುನೋಡಬೇಕಿದೆ.