ಶಿರಸಿ: ಲೋಕಸಭಾ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಒಂದೇ ಕೋಮಿನ ಎರಡು ತಂಡಗಳ ನಡುವೆ ಮಾರಾಮಾರಿ ನಡೆದ ಘಟನೆ ವರದಿಯಾಗಿದೆ ಆದರೆ ಗಲಾಟೆ ನಡೆದ ಸ್ಥಳದಲ್ಲೇ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿದ್ದು ಇದೀಗ ಸುದ್ದಿಯಾಗಿದೆ.

ನಗರದ ಕಸ್ತೂರಬಾ ನಗರದ ಬಯಲು ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಅಸ್ಸಲಾಂ ಬಾಬಾಜಾನ್ ಎಂಬುವವನು ಕೊಲೆಯಾಗಿರುವವನು‌.

RELATED ARTICLES  ಯುವ ರೆಡ್ ಕ್ರಾಸ್ ಹಾಗೂ ಕೆ. ಎಂ.ಸಿ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಯಿತು.

ನಿನ್ನೆ ರಾತ್ರಿ ಒಂದೇ ಕೋಮಿನ ಎರಡು ಗುಂಪುಗಳು ಕಸ್ತೂರಬಾ ನಗರದಲ್ಲಿ ಗಲಾಟೆ ಮಾಡಿಕೊಂಡಿದೆ. ಈ ವೇಳೆ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಅನೀಫ್ ತಹಸೀಲ್ದಾರ್ ಗೆ ಚಾಕು ಇರಿಯಲಾಗಿತ್ತು. ತಕ್ಷಣದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಲಾಟೆಯನ್ನು ತಹಬದಿಗೆ ತಂದಿದ್ದರು. ಚಾಕುವಿಂದ ಇರಿತಗೊಂಡ ಅನೀಫ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿತ್ತು.

RELATED ARTICLES  ಸಾಧಕರನ್ನು ಸನ್ಮಾನಿಸಿದ ಅಂಕೋಲಾದ ಕಲ್ಪವೃಕ್ಷ ವಾಟ್ಸಪ್ ಬಳಗ

ಆದರೆ, ಈ ಗಲಾಟೆ ನಡೆದ ಸ್ಥಳದಲ್ಲೇ ಇಂದು ಬೆಳಿಗ್ಗೆ ಅಸ್ಸಲಾಂ ಮೃತ ಕೊಲೆ ಮಾಡಿರುಚ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲೆಗೆ ರಾಡ್ ನಿಂದ ಹೊಡೆದು, ಇರಿಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳದಲ್ಲಿ ಕಬ್ಬಿಣದ ರಾಡ್ ಕೂಡ ಪತ್ತೆಯಾಗಿದೆ.

ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: Face book