ಕುಮಟಾ : ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮಂಗಳವಾರ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟೂ ಶೇ. 70.07 ಮತದಾನವಾಗಿದೆ. ಕಳೆದ 2014ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ. 69.02 ಮತದಾನವಾಗಿತ್ತು. ಈ ಬಾರಿ ಮತದಾನದಪ್ರಮಾಣ ಹೆಚ್ಚಳವಾಗಿದ್ದು ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಮಸ್ತ ಜನತೆಗೆ ಬಿ.ಜೆ.ಪಿ ಪ್ರಮುಖರು ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಅನಂತಕುಮಾರ್ ಹೆಗಡೆಯವರ ಆಪ್ತರು ಹಾಗೂ ಈ ಚುನಾವಣೆಯ ಪ್ರಮುಖ ಜಿಲ್ಲಾ ಪೋಲಿಂಗ್ ಏಜೆಂಟ್ ಆಗಿದ್ದ ಶ್ರೀ ನಾಗರಾಜ ನಾಯಕ ತೊರ್ಕೆ ಯವರು ಕೃತಜ್ಞತೆ ಅರ್ಪಿಸಿದ್ದಾರೆ.
ಇಂದು ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಡಿಸಿಯವರ ಉಪಸ್ಥಿತಿಯಲ್ಲಿ ಸ್ಟಾಂಗ್ ರೂಂ ನ ಎಲ್ಲ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ನಾಗರಾಜ ನಾಯಕ ತೊರ್ಕೆಯವರು, ನಿನ್ನೆ ನಡೆದ ಮತದಾನ ಪ್ರಕ್ರಿಯೆಯ ಬಗ್ಗೆ ಹಾಗೂ ಚುನಾವಣಾ ಪೂರ್ವ ಹಾಗೂ ನಂತರದ ಪ್ರಕ್ರಿಯೆಯ ಬಗ್ಗೆ ಮಾತುಕತೆ ನಡೆಸಿದರು.
ಮತದಾನದ ಮೂಲಕ ಸದೃಢವಾದ ಭಾರತ ನಿರ್ಮಾಣದಲ್ಲಿ ಸಹಕರಿಸಿದ ಸಮಸ್ತ ಉತ್ತರ ಕನ್ನಡದ ಜನತೆಗೆ ಹೃದಯ ಪೂರ್ವಕ ಅಭಿವಂದನೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ ಚುನಾವಣಾ ಅಧಿಕಾರಿ ಹಾಗೂ ಡಿ.ಸಿ ಯವರಿಗೆ ಹಾಗೂ ಚುನಾವಣಾ ಪ್ರಾಧಿಕಾರಕ್ಕೆ ನಾಗರಾಜ ನಾಯಕ ಅಭಿನಂದನೆ ಸಲ್ಲಿಸಿದರು.