ಕುಮಟಾ:ಮಿರ್ಜಾನಿನ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದ ನೂತನ ಶಿಲಾಮಯ ಕಟ್ಟಡ ಉದ್ಘಾಟನೆ ಹಾಗೂ ಶ್ರೀ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವು ಇದೇ ಬರುವ ದಿನಾಂಕ ಏಪ್ರಿಲ್ 26, 27 ಹಾಗೂ 28 ರಂದು ನೆರವೇರಲಿದೆ.
ಸೊಂದಾ ಸ್ವರ್ಣವಲ್ಲಿ ಶ್ರಿಗಳಾದ ಶ್ರೀ ಶ್ರಿಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೆಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳಲ್ಲಿ ಕಾರ್ಯಕ್ರಮ ಸುಸಂಪನ್ನಗೊಳ್ಳಲಿದ್ದು, ಪ್ರತಿನಿತ್ಯವೂ ಅನ್ನಸಂತರ್ಪಣೆ ಹಾಗು ರಾತ್ರಿ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸದರಿ ಕಾರ್ಯಕ್ರಮಕ್ಕೆ ಸಕಲ ಭಕ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರಿದೆವರ ಕೃಪೆಗೆ ಪಾತ್ರರಾಗಬೆಕಾಗಿ ದೇವಸ್ಥಾನದ ಆಡಳಿತ ಸಮಿತಿ ವಿನಂತಿಸಿದೆ.