ಗೋಕರ್ಣ: ಗೋಕರ್ಣದ
ಮುಖ್ಯ ಕಡಲ ತೀರದ ಬಳಿ ಇರುವ ಗೋಕರ್ಣ ಅಡ್ಟೆಂಚರ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಕುಟುಂಬದ ಅಪ್ರಾಪ್ತ ವಯಸ್ಸಿನ ಹುಡುಗಿ ಹಾಗೂ ಸ್ನೇಹಿತೆ ಸ್ನಾನ ಮಾಡುತ್ತಿರುವುದನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ ಎಂಬುದಾಗಿ ಪ್ರಕರಣ ದಾಖಲಾಗಿದೆ.

ಪಕ್ಕದ ರೂಮ್ನಿಂದ ಕೆಲವರು ಮೊಬೈನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ ಎಂದು ಬೆಂಗಳೂರಿನ ಮಹಿಳೆವೋರ್ವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES  ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಎಪ್ರಿಲ್ . 20 ರಂದು ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆ ಸ್ನಾನ ಮಾಡುತ್ತಿದ್ದರು. ಆದರೆ ಪಕ್ಕದ ರೂಮ್ನ ಬಾತ್ರೂಂ ಗೋಡೆ ಮೇಲಿಂದ ಯಾರೋ ಮೊಬೈಲ್ ಮೂಲಕ ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿದ್ದಾರೆ. ಅದ್ದರಿಂದ ಅಂದು ಪಕ್ಕದ ರೂಮ್ನಲ್ಲಿದ್ದ ವ್ಯಕ್ತಿಗಳ ಮೇಲೆ ಸಂಶಯ ವ್ಯಕ್ತಪಡಿಸಿ ಮಹಿಳೆ ಈ ದೂರು ದಾಖಲಿಸಿದ್ದಾರೆ .

RELATED ARTICLES  ಉತ್ತರಕನ್ನಡದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯದವರೇ ಹೆಚ್ಚು?

ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆ ಪಿಎಸ್ಐ ಸಂತೋಷಕುಮಾರ್ ಐಪಿಸಿ ಸೆಕ್ಷನ್ 354 (ಸಿ) ಮತ್ತು 12 ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.