ಸಿದ್ದಾಪುರ: ಸಿದ್ದಾಪುರ ತಾಲೂಕಿನಲ್ಲಿ ಇದುವರೆಗೆ ಶಂಕಿತ ಮಂಗನಕಾಯಿಗೆ ಬಲಿಯಾದವರ ಸಂಖ್ಯೆ 6ನ್ನು ತಲುಪಿದ್ದು, ನಿನ್ನೆ ಬಾಳಗೋಡಿನ 60 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮಂಗನ ಕಾಯಿಲೆ ಪೀಡಿತ ಸಿದ್ದಾಪುರದಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಧಿಕಾರಿಗಳ ಸಭೆಗೂ ಮುನ್ನ ಸಾರ್ವಜನಿಕರ ಅಹವಾಲನ್ನು ಕೇಳಿದ ಸಿಇಒ, ಸಾರ್ವಜನಿಕರ ಪ್ರಶ್ನೆಗಳಿಗೆ ಅಧಿಕಾರಿಗಳ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು.

RELATED ARTICLES  ಸಂಪನ್ನವಾಯ್ತು ಕುಮಟಾ ಅರ್ಬನ್ ಬ್ಯಾಂಕ್ ಶತಮಾನೋತ್ಸವ

ಮಂಗನಕಾಯಿಲೆ ತಡೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಿದ ಅವರು ಯಾರಿಗಾದರೂ ಜ್ವರದ ಗುಣಲಕ್ಷಣಗಳು ಕಂಡುಬಂದು ತಾಲೂಕು ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಕೂಡಲೇ ಅವರಿಗೆ ಮೆಗ್ಗಾನ್ ಅಥವಾ ಮಣಿಪಾಲ್ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿ, ಸಿಬ್ಬಂದಿಯ ಕೊರತೆ ಕುರಿತು ಹಲವಾರು ಕಂಪ್ಲೇಂಟ್​ಗಳಿದ್ದು, ಇನ್ನೊಂದು ವಾರದ ಒಳಗಾಗಿ ಅದನ್ನ ಪರಿಹರಿಸಲಾಗುವುದು ಅಂತಾ ತಾಲೂಕು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು. ಮೃತಪಟ್ಟವರ ಕುಟುಂಬಗಳಿಗೆ ಪರಿಹಾರದ ಕುರಿತು ಡಿಸಿಯವರೊಡನೆ ಚರ್ಚಿಸಿ ಇದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

RELATED ARTICLES  ಮಧ್ಯವರ್ತಿಗಳ ಹಾವಳಿ ತಡೆಗೆ affidavit based conversion ತಂತ್ರಾಂಶ