ಕಾರವಾರ : ಕಾರವಾರದ ಕದಂಬ ನೌಕಾನೆಲೆಯಲ್ಲಿ ಇದ್ದ ದೇಶದ ಅತಿದೊಡ್ಡ ಯುದ್ದನೌಕೆ ಐ ಎನ್ ಎಸ್ ವಿಕ್ರಮಾದಿತ್ಯ
ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣದ ಸಂಬಂಧ ಗುಜರಾತಿಗೆ ತೆರಳಿ ಇಂದು ಮುಂಜಾನೆ ಕಾರವಾರದ ಸೀಬರ್ಡ್ ನೌಕಾನೆಲೆಗೆ ವಾಪಸ್ಸಾಗಿತ್ತು ಆದರೆ ಇದರಲ್ಲಿ ಬೆಂಕಿ ಅವಗಡ ಸಂಭವಿಸಿದ ಘಟನೆ ವರದಿಯಾಗಿದೆ.
ಹಡಗಿನ ಒಳಭಾಗದ ಬಾಯ್ಲರ್ ಗೆ ಬೆಂಕಿ ಕಾಣಿಸಿಕೊಂಡು ಏಳು ಜನ ಸಿಬ್ಬಂದಿಗಳಿಗೆ ಗಂಭಿರ ಗಾಯವಾಗಿ ಓರ್ವ ಅಧಿಕಾರಿ ಸಾವುಕಂಡ ಘಟನೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ಸಂಭವಿಸಿದೆ.
ಈ ವೇಳೆ ಹಡಗಿನ ಬಾಯ್ಲರ್ ಕಂಪಾರ್ಟ್ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತ್ತು.ತಕ್ಷಣದಲ್ಲಿ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಬೆಂಕಿ ಆರಿಸಿದ್ದು ಈ ವೇಳೆಅಸ್ವಸ್ಥಗೊಂಡಿದ್ದ ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್.ಚೌಹಾಣ್ ಸಾವು ಕಂಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಏಳು ಜನರು ಕದಂಬ ನೌಕಾನೆಲೆಯ ಪತಾಂಜಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.