ಮೇಷ:- ನಿಮ್ಮನ್ನು ಕಂಡು ಅಸೂಯೆ ಪಡುವಂತಹ ಜನ ಸಿಗಬಹುದು. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ. ನಿಮ್ಮ ಕುಟುಂಬ ವರ್ಗದವರು, ಬಂಧುಗಳು ಹಿತೈಷಿಗಳು ನಿಮ್ಮ ಕಾರ್ಯಕ್ಕೆ ಸಹಾಯ ಹಸ್ತ ನೀಡುವರು.


ವೃಷಭ:- ಮಕ್ಕಳು ಅನವಶ್ಯಕವಾಗಿ ಮುನಿಸಿಕೊಳ್ಳಬಹುದು. ಈಬಗ್ಗೆ ಎಚ್ಚರವಿರಲಿ. ಬೆಳೆದ ಮಕ್ಕಳನ್ನು ದಂಡಿಸುವಾಗ ಎಚ್ಚರಿಕೆಯಿಂದ ಇರಬೇಕು. ಸದ್ಯಕ್ಕೆ ಅವರ ಆಚಾರ ವಿಚಾರಗಳನ್ನು ಟೀಕೆ ಮಾಡದೆ ಸೂಕ್ತ ಸಮಯಕ್ಕಾಗಿ ಕಾಯುವುದು ಒಳಿತು.


ಮಿಥುನ:- ಎಷ್ಟೇ ಕೋಪ ಬಂದರೂ ಆರ್ಭಟ ಬೇಡ. ಕೋಪ ಅನರ್ಥಕ್ಕೆ ದಾರಿಯಾಗುತ್ತದೆ. ಜನ್ಮದ ರಾಹು ಅನವಶ್ಯಕವಾಗಿ ಮಾನಸಿಕ ಒತ್ತಡ ತಂದೊಡ್ಡುವನು. ದುರ್ಗಾದೇವಿಯನ್ನು ಪ್ರಾರ್ಥಿಸುವುದು ಒಳ್ಳೆಯದು. ಆದಷ್ಟು ತಾಳ್ಮೆಯಿಂದ ಇರಿ.

ಕಟಕ:- ದೂರದ ಪ್ರಯಾಣ ದಿಢೀರನೇ ನಿರ್ಧಾರವಾಗುವ ಸಾಧ್ಯತೆ ಇದೆ. ಸಂಗಾತಿಯ ಚುಚ್ಚುಮಾತುಗಳು ಮನಸ್ಸಿಗೆ ಆಘಾತವನ್ನುಂಟು ಮಾಡುವುದು. ವಿಘ್ನನಿವಾರಕ ಗಣೇಶನ ಮಂದಿರಕ್ಕೆ ಹೋಗಿ ಪ್ರಾರ್ಥಿಸಿ. ಸಾಧ್ಯವಾದರೆ 21 ಗರಿಕೆ ಪತ್ರೆ ನೀಡಿ.

RELATED ARTICLES  ಟಿಪ್ಪು ಜಯಂತಿ ಆಚರಿಸುವುದರಿಂದ ರಾಜ್ಯದ ಜನತೆಗೆ ಯಾವುದೇ ಲಾಭ ಇಲ್ಲ!

ಸಿಂಹ:- ಹತ್ತಿರದ ಜನರೇ ಕೆಲವು ದೋಷಾರೋಪಗಳನ್ನು ಮಾಡುವ ಸಾಧ್ಯತೆ ಇದೆ. ಆದರೆ ನಿಮ್ಮ ಬಾಲ್ಯ ಸ್ನೇಹಿತರು ಆರೋಪಗಳಲ್ಲಿ ಹುರುಳಿಲ್ಲ ಎಂದು ಸಾಬೀತು ಪಡಿಸುವುದರಿಂದ ಮನಸ್ಸಿಗೆ ಕೊಂಚ ನಿರಾಳವಾಗುವುದು.

ಕನ್ಯಾ:-ಲವಲವಿಕೆಯ ಮಾತುಗಳು ನಿಮ್ಮನ್ನು ನಾಲ್ಕು ಜನರ ನಡುವೆ ಗೆಲುವಿನ ದಾರಿಗೆ ತಲುಪಿಸುತ್ತವೆ. ಮನೆಯಲ್ಲಿನ ವಾತಾವರಣ ಆಹ್ಲಾದಕರವಾಗಿದ್ದು ಮನಸ್ಸಿಗೆ ಸಂತೋಷ ನೆಮ್ಮದಿ ನೀಡುವುದು.

ತುಲಾ:- ಹಳೇ ವ್ಯಾಜ್ಯ ಒಂದರಿಂದ ಹೊರಬರುವ ನಿಮಗೆ ಹೊಸ ಅವಕಾಶಗಳು ಕೈಬೀಸಿ ಕರೆಯುವವು. ಇವು ನಿಮ್ಮ ಸಿದ್ಧಿಗೆ ರಹದಾರಿ ಆಗಲಿದೆ. ಮಡದಿ ಮಕ್ಕಳೊಂದಿಗೆ ಸಂತೋಷವಾಗಿ ಕಾಲ ಕಳೆಯುವ ಸಂದರ್ಭ ಬರುವುದು.

ವೃಶ್ಚಿಕ:- ಹಿರಿಯರನ್ನು ಆರೈಕೆ ಮಾಡುವ ವಿಚಾರದಲ್ಲಿ ಹಿಂದೇಟು ಹಾಕುವುದು ಬೇಡ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಸಿಗುವುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಗುರುವಿನ ಮಂತ್ರ ತಪ್ಪದೇ ಪಠಿಸಿ.

RELATED ARTICLES  ಬೆಳಗೆರೆಗೆ ಭೂಗತ ಲೋಕದ ನಂಟಿದೆ – ಸುನಿಲ್ ಹೆಗ್ಗರವಳ್ಳಿ ಗಂಭೀರ ಆರೋಪ

ಧನುಸ್ಸು:- ಖರ್ಚಿನ ದಾರಿಗಳನ್ನು ನಿಯಂತ್ರಿಸಿ. ಹಾಸಿಗೆ ಇದ್ದಷ್ಟೆ ಕಾಲು ಚಾಚುವುದು ಒಳ್ಳೆಯದು. ಶನಿ ದೇವರ ಸ್ತೋತ್ರ ಪಠಿಸಿ. ಬಡವರಿಗೆ ಆಹಾರ ನೀಡಿ ಇದರಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುವುದು.

ಮಕರ:- ನಿಮ್ಮ ಬಾಳಸಂಗಾತಿ ವಿಚಾರದಲ್ಲಿ ಅಲಕ್ಷ್ಯ ಮಾಡುವುದು ಬೇಡ. ಅವರ ಸಲಹೆಗಳು ನಿಮಗೆ ಅನುಕೂಲಕರವಾಗಿರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸುವರು.

ಕುಂಭ:- ಉನ್ನತ ವ್ಯಾಸಂಗಕ್ಕೆ ಅಪರೂಪದ ಅವಕಾಶಗಳು ಲಭ್ಯವಾಗಲಿವೆ. ಶ್ರೀದುರ್ಗಾ ಅಷ್ಟೋತ್ತರ ಜಪಿಸುವುದು ಒಳ್ಳೆಯದು. ಯಾವುದಾದರೂ ದೇವಿ ಮಂದಿರದಲ್ಲಿ ಅರ್ಚನೆ ಮಾಡಿಸಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಮೀನ:- ಹಳೆ ಕೆಲಸದ ಸ್ಥಳದಲ್ಲೇ ಮತ್ತೆ ಹೊಸ ಅವಕಾಶಗಳು ಸಿಗುವಂತ ಸಂದರ್ಭವಿದ್ದು, ನಿಮ್ಮ ಆಸೆಗಳು ಕೈಗೂಡುವವು. ಷೇರು ಬಜಾರಿನಲ್ಲಿ ಹಣ ಹೂಡುವಾಗ ಎರಡು ಬಾರಿ ಚಿಂತಿಸಿ. ಹಾಕಿದ ಹಣಕ್ಕೆ ಉತ್ತಮ ಲಾಭ ಬರದೆ ಇರುವ ಸಾಧ್ಯತೆ ಇದೆ.