ಮೇಷ:- ನಿಮ್ಮ ಯೋಜನೆಗಳನ್ನು ಹಿತಮಿತವಾಗಿ ಹಾಕಿಕೊಳ್ಳಿ. ಲಾಭ ಮತ್ತು ನಷ್ಟದ ವಿಚಾರದಲ್ಲಿ ಸ್ಥಿತಪ್ರಜ್ಞನಾಗಿರು ಎಂದು ಗೀತೆ ಬೋಧಿಸುತ್ತದೆ. ತಂದೆ ಆರೋಗ್ಯದಲ್ಲಿ ತೊಂದರೆಯಾಗುವು ಸಾಧ್ಯತೆ ಇದೆ. ಕುಲದೇವರನ್ನು ಸ್ಮರಣೆ ಮಾಡಿ.
ವೃಷಭ:- ಎಲ್ಲಾ ಕಾರ್ಯಗಳಲ್ಲೂ ಸೋಲುಂಟಾಗುವ ಸಾಧ್ಯತೆ ಇದೆ. ನಿರ್ವಿಘ್ನಗಳನ್ನು ತಾರದಂತೆ ಗಣಪತಿ ಮತ್ತು ದುರ್ಗೆಯನ್ನು ಆರಾಧಿಸಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತನ್ನು ಕೇಳಿದಲ್ಲಿ ಹೆಚ್ಚಿನ ತೊಂದರೆ ಎದುರಾಗುವುದಿಲ್ಲ.
ಮಿಥುನ:- ಬೌದ್ಧಿಕ ಚಾತುರ್ಯ ಪ್ರವೀಣರಾದ ನಿಮಗೆ ಬಾಳಿನಲ್ಲಿ ಸಂತಸದ ಕ್ಷ ಣಗಳನ್ನು ಆಸ್ವಾದಿಸಲು ಸಾಕಷ್ಟು ಸಮಯ ದೊರೆಯುವುದು. ಹಳಿ ತಪ್ಪದ ರೈಲು ಸರಾಗವಾಗಿ ಓಡುತ್ತದೆ. ಆದರೆ ನಾಲಿಗೆ ತಪ್ಪಿ ಮಾತನಾಡಿದಾಗ ಅವಘಡಗಳು ಜಾಸ್ತಿ, ಮಾತಿನಲ್ಲಿ ಮೃದುತ್ವ ಇರಲಿ.
ಕಟಕ:- ನಿಮ್ಮ ವಿಚಾರದಲ್ಲಿ ಕೆಲವರು ನೇರವಾಗಿಯೇ ಕಿರುಕುಳ ಕೊಡುತ್ತಾರೆ. ಆದರೆ ದೈವಕೃಪೆಯಿಂದ ಅವರೆಲ್ಲರ ಕಿರುಕುಳ ನಿಮಗೆ ಪುಷ್ಪವೃಷ್ಟಿಯನ್ನು ಮಾಡುವಂತೆ ಆಗುತ್ತದೆ. ಧೈರ್ಯದಿಂದಿರಿ.
ಸಿಂಹ:- ಧೈರ್ಯದಿಂದ ಗೆಲ್ಲುವ ಕಾಲ ವಿರೋಧಿಗಳಿಂದಲೇ ಬರುವ ಸಂಭವವಿದೆ. ಕೆಲಕಾಲ ಊರನ್ನು ಬಿಡುವ ಸಾಧ್ಯತೆ ಇದೆ. ಆದರೆ ಇದರಿಂದ ನಿಮಗೆ ಲಾಭವೇ ಆಗುವುದು. ದಿವ್ಯವಾದ ಶಕ್ತಿಯ ಸಂಪಾದನೆಗೆ ದಾರಿ ಆಗುವುದು. ಅದರಿಂದ ಮನಸ್ಸು ಪ್ರಫುಲ್ಲವಾಗುವುದು.
ಕನ್ಯಾ:- ಸಾಲದ ಬಾಧೆಯಿಂದ ಮುಕ್ತನಾಗಲು ಹೊಸ ಸಾಲ ಮಾಡುವುದು ತರವಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ನಿಮ್ಮನ್ನು ಬಾಧಿಸಲು ಹಠ ಹೊತ್ತಿರುವ ಜನರ ವಿರುದ್ಧ ಸಾತ್ವಿಕ ಹೋರಾಟ ಮಾಡಿ. ಕೆಲವೊಂದು ಅಗೋಚರ ಶಕ್ತಿಯು ನೀವು ಗೆಲ್ಲುವಂತೆ ಮಾಡುವುದು. ಭಗವಂತನಿಗೆ ಶರಣು ಹೋಗಿ.
ತುಲಾ:- ನಯವಂಚಕರನ್ನು ನಯವಾಗಿಯೇ ನಿಯಂತ್ರಿಸಿ. ಅನೇಕ ರೀತಿಯ ಒಳಿತುಗಳನ್ನು ಸಾಧಿಸಿಕೊಳ್ಳಲು ಕಾಲ ಪಕ್ವವಾಗಿದೆ. ಎಲ್ಲರೊಂದಿಗೂ ಮುಕ್ತವಾಗಿ ಬೆರೆಯಿರಿ. ಆದರೆ ಅವರು ನಿಮ್ಮ ಹೇಗಲೇರಿ ಕುಳಿತುಕೊಳ್ಳದಂತೆ ನಿಗಾ ವಹಿಸಿ. ನಿಮ್ಮ ಸ್ವಂತ ಶಕ್ತಿಯಿಂದ ಲಾಭವುಂಟಾಗುವುದು.
ವೃಶ್ಚಿಕ:- ಹೊಯ್ದಾಡುವ ಮನಸ್ಸು ಅಪಾಯಕಾರಿ. ಬಹುಮುಖ್ಯವಾದುದನ್ನು ಮಾಡಿ ಮುಗಿಸಬೇಕೆಂಬ ಸಂಕಲ್ಪದೊಂದಿಗೆ ಆರಂಭಿಸಿ. ನಿಮ್ಮ ಕಾರ್ಯಗಳಲ್ಲಿ ಜಯ ಹೊಂದಲು ಸಾಧ್ಯವಾಗುವುದು. ಬಹು ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ವಿಳಂಬವಾದರೂ ಕಾರ್ಯಸಿದ್ದಿ ಆಗುವುದು.
ಧನುಸ್ಸು:- ಬಹು ಖರ್ಚಿನ ಬಾಬ್ತುಗಳ ಬಗ್ಗೆ ವಿಚಾರ ಮಾಡದೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಮುಂದಾಗದಿರಿ. ಆಂಜನೇಯನ ಕೃಪಾಶೀರ್ವಾದಕ್ಕಾಗಿ ಹನುಮಾನ್ ಚಾಲೀಸಾ ಪಠಣ ಮಾಡಿ. ಪ್ರಯಾಣ ಕಾಲದಲ್ಲಿ ತುಸು ಎಚ್ಚರಿಕೆ ಇರಲಿ.
ಮಕರ:- ಅಧಿಕಾರವನ್ನು ಪಡೆಯಲು, ಮಹತ್ವದ ಪುರಸ್ಕಾರ ಪಡೆಯಲು ಮತ್ತು ಲಾಭದಾಯಕ ವ್ಯವಹಾರದಲ್ಲಿ ಕೈಹಾಕಲು ಇದು ಉತ್ತಮ ಅವಧಿ. ಬುದ್ಧಿವಂತರು ನೀವು ಎಂಬುದಕ್ಕೆ ಎರಡು ಮಾತಿಲ್ಲ. ಅನ್ಯರನ್ನು ಅಳೆದು ಅವರ ಶಕ್ತಿ ತಿಳಿಯಲು ತಾಳ್ಮೆ ಇರಲಿ. ಧೈರ್ಯಹೀನರಾಗದಿರಿ.
ಕುಂಭ:- ಕೆಲಸ ಕಾರ್ಯಗಳು ಜಯ ತರುತ್ತದೆಯಾದರೂ ಖರ್ಚಿಗೂ ಅನೇಕ ದಾರಿಗಳಿವೆ. ಗಣಪತಿ ಆರಾಧನೆಯಿಂದ ವ್ಯರ್ಥ ಕಸರತ್ತುಗಳಿಗೆ ಅಡೆತಡೆಗಳು ಬೀಳುತ್ತವೆ. ಸ್ವಯಂ ಉದ್ಯೋಗಿಗಳು, ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ಫಲವಿದೆ.
ಮೀನ:- ಅಂದುಕೊಂಡ ವೇಗದಲ್ಲಿ ಹೆಜ್ಜೆ ಇಡಲು ಸಾಧ್ಯವಾಗದು. ಏನೋ ಒಂದು ತಡೆಯುತ್ತಿರುವಂತೆ ಜಡತೆ ಬಂದು ಮನಸ್ಸಿಗೆ ಕಿರಿಕಿರಿ ಉಂಟುಮಾಡಲಿದ್ದು ಅದನ್ನು ಎದುರಿಸಬೇಕಾಗುವುದು. ಮನೆಯ ಸಮಸ್ಯೆಗಳನ್ನು ಹೊರಗಡೆ ಚರ್ಚೆ ಮಾಡುವುದು ಸೂಕ್ತವಲ್ಲ.