ಅಂಕೋಲಾ: ಕಾರವಾರ ತಾಲೂಕಿನ ಶಿರವಾಡದ ರೈಲ್ವೆ ನಿಲ್ದಾಣದಿಂದ ಕಾರವಾರ-ಬೆಂಗಳೂರು ಸೆಂಟ್ರಲ್ ರೈಲು ಹೊರಟಿತ್ತು. ಇದೆ ರೈಲ್ವೆಯ ತೈಲ ಟ್ಯಾಂಕಿಗೆ ಹಾನಿಯಾಗಿದ್ದರಿಂದ ತೈಲ ಸೋರಿಕೆಯಾಗಿದೆ.
ಅದನ್ನು ರೈಲ್ವೆ ಅಧಿಕಾರಿಗಳು ಗಮನಿಸದೆ ಇರುವುದರಿಂದ ರೈಲ್ವೆ ಅಂಕೋಲಾವರೆಗೆ ಪ್ರಯಾಣಿಸಿದೆ. ಆದರೆ ರೈಲ್ವೆ ತೈಲ ಟ್ಯಾಂಕ್ ಒಡೆದು ತೈಲ ಸೋರಿಕೆಯಾಗುತ್ತಿರುವುದನ್ನು ಗಮಿಸಿದ ಪ್ರಯಾಣಿಕರ ಸಮಯ ಪ್ರಜ್ಞೆಯಿಂದಾಗಿ ನಡೆಯಬಹುದಾದ ಅನಾಹುತ ತಪ್ಪಿದ ಘಟನೆ ಅಂಕೋಲಾ ತಾಲೂಕಿನಲ್ಲಿ ಸಂಭವಿಸಿದೆ.
ಹಿಂಬದಿ ಬೋಗಿಗಳಲ್ಲಿ ಕುಳಿತ ಪ್ರಯಾಣಿಕರಿಗೆ ಡೀಸೆಲ್ ಸೋರಿಕೆಯಾಗಿರುವುದನ್ನು ಗಮಿಸಿದ್ದಾರೆ. ಅಂಕೋಲಾದಲ್ಲಿ ರೈಲು ನಿಂತ ಬಳಿಕ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಟ್ಯಾಂಕ್ ಒಡೆದು ಡೀಸೆಲ್ ಸೋರಿಕೆಯಾಗುತ್ತಿರುವುದು ಖಾತ್ರಿಗೊಂಡಿದೆ.
ಅದಾದ ಬಳಿಕ ಮಂಗಳೂರಿಗೆ ತೆರಳುವ, ಸಾಮಾನ್ಯ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಮಡಗಾಂವ್-ಮಂಗಳೂರು ಪ್ಯಾಸೆಂಜರ್ ರೈಲಿಗೆ ಕಳುಹಿಸಿಕೊಡಲಾಗಿದೆ.