ಹೊನ್ನಾವರ: ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ನ ಉದ್ಘಾಟನಾ ಕಾರ್ಯಕ್ರಮ ಹಾಗೂ ಅಪರಂಜಿ ಕಡತೋಕಾ ವಿರಚಿತ ಸುಮಾರು 1500 ವರ್ಷಕ್ಕೂ ಹಿಂದಿನ ಇತಿಹಾಸದ ಕುರಿತ ಅಹಿಚ್ಛತ್ರ ನಾಟಕದ ಪ್ರದರ್ಶನ ಉಪ್ಲೆಯ ಮಹಾಲಿಂಗೇಶ್ವರ ದೇವಾಲಯದ ರಥಬೀದಿಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ದೀಪ ಬೆಳಗಿ ಉದ್ಘಾಟಿಸಿದರು. ಸಿಂಚನ ವಾಹಿನಿ ಅನೇಕ ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯ ಮಾಡುತ್ತಿದೆ. ಹಣಗಳಿಕೆ ಅಷ್ಟೇ ಇದರ ಉದ್ದೇಶ ಆಗಿರದೆ ಗ್ರಾಮೀಣ ಅಭಿವೃದ್ಧಿ ಹಾಗೂ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿ ಹವ್ಯಕರು ಯಾರಿಗೂ ಕೆಡುಕು ಬಯಸದೆ ಬದುಕುವವರು ಎಂಬುದಾಗಿ ಬಣ್ಣಿಸಿದರು.

RELATED ARTICLES  ವಿದೇಶದಲ್ಲಿ ಉದ್ಯೋಗ ಕೊಡುತ್ತೇನೆಂದು ಹಣ ಪಡೆದು ವಂಚನೆ ಮಾಡುತ್ತಿದ್ದಾತ ಪೊಲೀಸ್ ಬಲೆಗೆ

ಕೆರೆಮನೆ ಶಿವಾನಂದ ಹೆಗಡೆಯವರು ಸಿಂಚನ ಅಂತರ್ಜಾಲ ಪತ್ರಿಕೆ ಉದ್ಘಾಟಿಸಿ ಮಾತನಾಡಿ  ಹತ್ತು ವರ್ಷಗಳಿಂದ ಸಿಂಚನ ವಾಹಿನಿ ಸ್ಥಾಪಿಸಿದ ಅವರ ಸಾಹಸಕ್ಕೆ ಮೆಚ್ಚಬೇಕು ಎಂದು ಅವರು ಹೇಳಿದರು.ಹವ್ಯಕರು ಸಮಾಜಕ್ಕೆ ತೋರಿಸಿಕೊಳ್ಳುವಲ್ಲಿ ಹಿಂಜರಿಯುವುದು ಕಾಣುತ್ತಿದೆ ಎಂದರು.

ಜಿ.ಪಂ ಸದಸ್ಯರು ಹಾಗೂ ಕಾಂಗ್ರೆಸ್ ಪ್ರಮುಖರಾದ ಶಿವಾನಂದ ಹೆಗಡೆಯವರು ಮಾತನಾಡಿ ಈ ವೇದಿಕೆ ಅಪೂರ್ವ ವೇದಿಕೆ , ಹಲವಾರು ಉತ್ತಮ ‌ಕಾರ್ಯದಲ್ಲಿ ತೊಡಗಿದವರು ಇಲ್ಲಿರುವುದು ಹೆಮ್ಮೆಯ ವಿಷಯ ಎಂದರು. ಹವ್ಯಕರ ಬಗ್ಗೆ ಉತ್ತಮ ‌ಮಾತನಾಡಿದ ದಿನಕರ ಶೆಟ್ಟಿಯವರನ್ನು ಅಭಿನಂದಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ‌ ಸದಸ್ಯೆ ಶ್ರೀಕಲಾ ಶಾಸ್ತ್ರಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತ ಅನೇಕ ಪರಂಪರೆ‌ ಹಾಗೂ ವೈವಿದ್ಯತೆ ಹೊಂದಿದೆ ಹವ್ಯಕರು ಪರೋಪಕಾರಕ್ಕಾಗಿ ಬದುಕಿದವರು ಅಂತಹ ಉತ್ಕೃಷ್ಟ ಸಂಸ್ಕೃತಿಗಳ ಅನಾವರಣ ಇಲ್ಲಿ ಆಗುತ್ತಿರುವುದು ಹೆಮ್ಮೆ ಎಂದರು.

RELATED ARTICLES  ಸಿನಿಮೀಯ ರೀತಿಯಲ್ಲಿ ಬಚಾವಾದ ಸವಾರರು

ಅಹಿಚ್ಛತ್ರದ ಹಸ್ತಪ್ರತಿಯನ್ನು ಹವ್ಯಕ‌ ಮಹಾಸಭಾದ ಉಪಾಧ್ಯಕ್ಷರಾದ ಶ್ರೀಧರ ಭಟ್ಟ ಬಿಡುಗಡೆಮಾಡಿ ಮಾತನಾಡಿದರು. ಹಿರಿಯ ವಿದ್ವಾಂಸರು ಹಾಗೂ ಕಲಾವಿದರು ಆದ ಪ್ರೋ.ಎಸ್ ಶಂಭು ಭಟ್ಟ ಕಡತೋಕಾ ನಾಟಕದ ಹಿನ್ನೆಲೆ ಪರಿಚಯಿಸಿದರು. ವಕೀಲರಾದ ಸತೀಶ ಭಟ್ಟ ಉಳ್ಗೆರೆಯವರು ಸಿಂಚನ ಟ್ರಸ್ಟ್ ಪರಿಚಯಿಸಿದರು.

ಸಿಂಚನ‌ವಾಹಿನಿಯ ಮುಖ್ಯಸ್ಥರಾದ ಕೃಷ್ಣಾನಂದ ಭಟ್ಟ ಎಲ್ಲರನ್ನೂ ಸ್ವಾಗತಿಸಿದರು. ಅನೇಕ ‌ಕಲಾವಿದರ ಕೂಡುವಿಕೆಯಲ್ಲಿ ಅಹಿಚ್ಛತ್ರ ನಾಟಕ ಜನ ಮನ ಸೂರೆಗೊಂಡಿತು.