ಭಟ್ಕಳ: ಇಲ್ಲಿನ ಬಂದರು ಸಮೀಪ ಇಬ್ಬರು ಮೀನುಗಾರರು ನೀರಿಗೆ ಬಿದ್ದು ನಾಪತ್ತೆಯಾಗಿದ್ದು, ಮೃತ ದೇಹದ ಶೋದ ಕಾರ್ಯದ ನಡೆಸಿದ್ದು ತಡರಾತ್ರಿ ಓರ್ವ ಮೀನುಗಾರನ ಮೃತ ದೇಹ ಪತ್ತೆಯಾಗಿದ್ದು ಇನ್ನೋರ್ವ ಮೀನುಗಾರ ಮೃತ ದೇಹ ಭಾನುವಾರದಂದು ಸಂಜೆ ಪತ್ತೆಯಾಗಿದ ಬಗ್ಗೆ ವರದಿಯಾಗಿದೆ.
ಜೂಜೇ ಬಚ್ಸಾವ್ ರೆಬಲ್ ಶನಿವಾರದಂದು ಪತ್ತೆಯಾದ ಮೃತ ಮೀನುಗಾರ ಇಲ್ಲಿನ ಮುರ್ಡೇಶ್ವರ ನಿವಾಸಿ ಎಂದು ತಿಳಿದು ಬಂದಿದೆ.
ಜೂಜೆ ಬಚ್ಸಾವ್ ರೆಬಲ್ ಐಶ್ವರ್ಯ ಬೋಟನಲ್ಲಿ ಕಳೆದ 4 ವರ್ಷದಿಂದ ಮೀನುಗಾರಿಕೆ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಶನಿವಾರದಂದು ಸಂಜೆ ವೇಳೆ ಇಲ್ಲಿನ ಬಂದರದ ಧಕ್ಕೆಯಲ್ಲಿ ನಿಲ್ಲಿಸಿಟ್ಟ ಬೋಟಗಳ ಪೈಕಿ ಒಂದು ಬೋಟನಿಂದ ಇನ್ನೊಂದು ಬೋಟ ದಾಟುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಈ ಅವಗಢ ಸಂಭವಿಸಿದೆ ಎಂದು ತಿಳಿದು ಬಂದಿದೆ.ಹಾಗೂ ಶನಿವಾರದಂದು ಸಂಜೆ ವೇಳೆ ಇನ್ನೊಂದು ಬೋಟನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಮೃತ ದೇಹ ಭಾನುವಾರದಂದು ಸಂಜೆ ಪತ್ತೆಯಾಗಿದೆ. ಮೃತ ಮೀನುಗಾರ ಅಜಯ ನಾಯಕ ಜಾಖಂಡ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ.