ಗೋಕರ್ಣ: ಬೆಳಗಾವಿ ಮೂಲದ ಕುಟುಂಬವೊಂದು ಪುಣ್ಯಕ್ಷೇತ್ರ ಗೋಕರ್ಣಕ್ಕೆ ಪ್ರವಾಸ ಮಾಡಲು ಬಂದಿದ್ದು, ಇಲ್ಲಿನ ಓಂ ಬೀಚ್ ಕಡಲ ತೀರ ಸ್ನಾನಕ್ಕೆ ತೆರಳಿದ್ದಾಗ ಸುಳಿಗೆ ಸಿಕ್ಕಿದ ಘಟನೆ ವರದಿಯಾಗಿದೆ.
ಪ್ರವಾಸಕ್ಕೆ ಬಂದವರಲ್ಲಿ ಒಬ್ಬರಾದ ಬಾಲಕ ಹುಸೈನ್ (14 )ಎನ್ನುವ ಸಮುದ್ರ ಸುಳಿಗೆ ಸಿಲುಕಿದ್ದರು. ಅದನ್ನು ನೋಡಿದ ಕುಟುಂಬದವರಾದ ಸಹಝಾದ(26),ಅಬ್ದುಲ್ಲಾ(20)ಬೇಪರಿ (42) ರಕ್ಷಣೆಗೆ ಹೋಗಿ ಅವರು ಕೂಡ ಸುಳಿಗೆ ಸಿಲುಕಿ ಜೀವ ರಕ್ಷಿಸಿ ಪರದಾಡುತ್ತಿರು.
ಇದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಪಾಂಡುರಂಗ ಅಂಬಿಗ ಪ್ರಭಾಕರ ಅಂಬಿಗ ತಕ್ಷಣ ರಕ್ಷಣೆಗೆ ಧಾವಿಸಿ ಪ್ರವಾಸಿಗರನ್ನ ರಕ್ಷಣೆ ಮಾಡಿ ಪ್ರಾಣ ಅಪಾಯದಿಂದ ಪಾರು ಮಾಡಿದ್ದಾರೆ.
ಈ ಸಂದರ್ಭಸಲ್ಲಿ ಪ್ರವಾಸಿ ಮಿತ್ರ ಸತೀಶ್ ನಾಯ್ಕ್ ಸಹಾಯ ಮಾಡಿರುತ್ತಾರೆ.