ಮೇಷ:- ಮೇಲಿಂದ ಮೇಲೆ ಬರುತ್ತಿರುವ ಆರ್ಥಿಕ ಅಡೆತಡೆ ಬೇಸರ ಉಂಟುಮಾಡುವುದು. ಹಿರಿಯರ ಅಥವಾ ಆತ್ಮೀಯ ವ್ಯಕ್ತಿಗಳೊಂದಿಗೆ ಚರ್ಚಿಸಿ ಅದಕ್ಕೊಂದು ಪರಿಹಾರ ಕಂಡುಕೊಳ್ಳುವಿರಿ. ಇದರಿಂದ ನಿಮ್ಮಲ್ಲಿ ತುಸು ಆತ್ಮವಿಶ್ವಾಸ ಹೆಚ್ಚಾಗುವುದು. ಸಂಬಂಧಿಗಳ ಸಹಕಾರದಿಂದ ನಡೆಸುವ ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುವುದು. ಸಹೋದ್ಯೋಗಿಗಳೊಂದಿಗೆ ಸೌಹಾರ್ದದಿಂದ ವರ್ತಿಸಿ.


ವೃಷಭ:- ಈ ಹಿಂದಿನ ಪರಿಶ್ರಮ ನಿಮಗೆ ಈಗ ಆದಾಯ ರೂಪದಲ್ಲಿ ಫಲ ನೀಡುವುದು. ಚಿನ್ನ, ಬೆಳ್ಳಿ ಖರೀದಿ ಬಗ್ಗೆ ಚಿಂತಿಸುವಿರಿ ಅಥವಾ ಅಡವಿಟ್ಟ ಬೆಲೆಬಾಳುವ ವಸ್ತುಗಳನ್ನು ಬಿಡಿಸಿಕೊಳ್ಳುವಿರಿ. ವ್ಯವಹಾರದಲ್ಲಿ ಚತುರನಾದ ಮಗನಿಗೆ ಉತ್ತಮ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುವವು. ಕಾಲಕಾಲಕ್ಕೆ ವಿಶ್ರಾಂತಿ ತೆಗೆದುಕೊಳ್ಳುವುದು ಅತಿಮುಖ್ಯ.


ಮಿಥುನ:
– ಉದ್ಯಮಿಗಳಿಗೆ ಹೊಸ ಹೊಸ ಯೋಜನೆಗಳನ್ನು ಆರಂಭಿಸಲು ಹೆಚ್ಚಿನ ಅವಕಾಶಗಳು ಬರಲಿವೆ. ಅವುಗಳ ಸಾಧಕ ಬಾಧಕಗಳನ್ನು ವಿಮರ್ಶಿಸಿ ನಿರ್ಧಾರ ತೆಗೆದುಕೊಳ್ಳುವುದು ಲೇಸು. ಚಿಕ್ಕ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನವಿರಲಿ. ಕಣ್ಣಿನ ಆರೋಗ್ಯದ ಬಗ್ಗೆ ಉದಾಸೀನ ಬೇಡ. ನಿವೃತ್ತಿಯಂಚಿನಲ್ಲಿರುವ ನೌಕರರು ತಮ್ಮ ಮುಂದಿನ ಜೀವನದ ಬಗ್ಗೆ ಒಂದು ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಸೂಕ್ತ.

ಕಟಕ:– ಸಾಹಿತಿಗಳಿಗೆ ಹಾಗೂ ಬರಹಗಾರರಿಗೆ ಉತ್ತಮ ದಿನಗಳಾಗಿದ್ದು ಹೆಚ್ಚು ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕ ಫಲಿತಾಂಶ ಪಡೆಯುವರು. ಉನ್ನತಾಧ್ಯಯನಕ್ಕೆ ಆರ್ಥಿಕ ನೆರವು ದೊರೆಯುವುದು. ಅಸಾಧ್ಯವೆನಿಸಿದ್ದ ಕೆಲವು ಕೆಲಸಗಳು ಅನಿರೀಕ್ಷಿತವಾಗಿ ಕೈಗೂಡಲಿವೆ. ವಾಹನ, ಆಸ್ತಿ ಖರೀದಿಯ ಯೋಗವಿದೆ. ಒತ್ತಡದಲ್ಲಿ ಕೆಲಸ ಮಾಡುವುದು ಉತ್ತಮವಲ್ಲ.

ಸಿಂಹ:– ತಪ್ಪು ತಿಳುವಳಿಕೆಯಿಂದ ಸೋದರನೊಂದಿಗೆ ಉಂಟಾಗಿದ್ದ ಭಿನ್ನಾಭಿಪ್ರಾಯ ದೂರವಾಗಲಿದೆ. ಎಲ್ಲರನ್ನೂ ಅತಿಯಾಗಿ ನಂಬುವುದು ಒಳ್ಳೆಯದಲ್ಲ. ಚಾಡಿ ಮಾತುಗಳನ್ನು ಕೇಳಿ ಬಂಧುಗಳೊಡನೆ ಮನಸ್ತಾಪ ಮಾಡಿಕೊಳ್ಳಬೇಡಿ. ಮಡದಿಯ ತವರು ಮನೆಯಿಂದ ಧನಸಹಾಯ ಬರುವ ಸಾಧ್ಯತೆ ಇದೆ. ಅದು ಅಪವ್ಯಯವಾಗದಂತೆ ನೋಡಿಕೊಳ್ಳಿ. ಹಲವು ವಿಷಯಗಳಲ್ಲಿ ಹಠ ಮಾಡುವುದರಿಂದ ನಿಮಗೇ ತೊಂದರೆ ಎದುರಾಗುವುದು. ಕುಟುಂಬದ ಆಂತರಿಕ ವಿಷಯಗಳನ್ನು ಅಲಕ್ಷಿಸಬೇಡಿ.

RELATED ARTICLES  ಗ್ರಾಮ ಪಂಚಾಯತ ಚುನಾವಣೆ : ಮಹತ್ವದ ವಿಷಯ ತಿಳಿಸಿದ ಜಿಲ್ಲಾಧಿಕಾರಿ

ಕನ್ಯಾ:-ನಿಮ್ಮ ಲೆಕ್ಕಾಚಾರಗಳು ಪಕ್ಕಾ ಆಗಲಿವೆ. ಬೃಹತ್‌ ಯೋಜನೆ ಅನ್ಯರ ಹಣದ ನೆರವಿನಿಂದ ಸುಗಮವಾಗುವುದು. ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳು ದೊರೆಯುವುದರಿಂದ ನೆಮ್ಮದಿ ಸಿಗುವುದು. ಬಾಕಿ ಹಣ ಸಕಾಲದಲ್ಲಿ ಬರುವುದು. ಪದವೀಧರ ಮಗನಿಗೆ ಉತ್ತಮ ಅವಕಾಶಗಳು ಬರಲಿವೆ. ಸ್ವಲ್ಪ ಸಮಯ ಮನೆಯಿಂದ ದೂರವಿದ್ದು ವಾಸ ಮಾಡುವ ಸಂದರ್ಭ ಬರುವುದು.

ತುಲಾ:-
 ಮತ್ತೊಬ್ಬರ ಮೇಲೆ ಆಪಾದನೆ ಮಾಡುವ ಮೊದಲು ಹಲವು ಬಾರಿ ಯೋಚಿಸಿ. ಇಲ್ಲವಾದರೆ ಅದೇ ವಿಷಯ ನಿಮ್ಮ ವಿರುದ್ಧವಾಗಿ ಅಪಮಾನವಾಗುವ ಸಾಧ್ಯತೆ ಇದೆ. ಪೂರ್ವ ಸಿದ್ಧತೆಯೊಂದಿಗೆ ಪಯಣಿಸುವುದು ಉತ್ತಮ. ನೀವಾಡುವ ಒಂದು ಮಾತಿನಿಂದ ಈಗಿರುವ ಸ್ಥಾನವೇ ಬದಲಾಗುವ ಸಾಧ್ಯತೆ ಇದೆ. ಹಣ ಕೊಡುಕೊಳ್ಳುವ ವಿಚಾರದಲ್ಲಿ ನಿಮ್ಮ ಅತಿ ನಂಬಿಕೆಯೇ ನಿಮ್ಮನ್ನು ಹೈರಾಣಾಗಿಸುವುದು.

ವೃಶ್ಚಿಕ:- ನೀವು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಆದಾಯ ನಿಮ್ಮ ಸ್ವಂತ ಉದ್ಯೋಗದಲ್ಲಿ ದೊರೆಯಲಿದೆ. ಅದನ್ನು ಜತನ ಮಾಡಲು ಬಲು ಕಷ್ಟ ಪಡಬೇಕಾಗುವುದು. ಪರಮಾಪ್ತರ ದಾಂಪತ್ಯದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯ ನಿಮ್ಮಿಂದ ಮಾತ್ರ ಬಗೆಹರಿಯಲಿದೆ. ಸೋದರಿ ಮನೆಯಲ್ಲಿ ನಿಮ್ಮ ಮುಂದಾಳತ್ವದಲ್ಲಿ ಮಂಗಳ ಕಾರ್ಯ ನಡೆಯಲಿದೆ. ಅನವಶ್ಯಕ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗಲಿದೆ.

ಧನುಸ್ಸು
:- ಗೊಂದಲ ಎಂಬುದು ಮಾನವನ ಜೀವನದಲ್ಲಿ ಸಹಜ. ಆದರೆ ಅದನ್ನು ಜಾಣತನದಿಂದ ಸರಿಯಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಬುದ್ಧಿವಂತರ ಲಕ್ಷ ಣ ಎಂಬುದನ್ನು ನೆನೆಯುತ್ತಿರಿ. ಮಾತಿನಲ್ಲಿ ಚತುರರಾದ ನೀವು ಇದನ್ನೇ ಬಂಡವಾಳವಾಗಿಸಿಕೊಂಡು ಎಲ್ಲವನ್ನು ಸಾಧಿಸುವಿರಿ. ಅಲ್ಪ ಬಂಡವಾಳದೊಂದಿಗೆ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಆರಂಭಿಸುವುದು ಒಳ್ಳೆಯದು. ಮನೆಯವರ ಒತ್ತಾಯಕ್ಕೆ ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ.

RELATED ARTICLES  ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆ ಕೇಂದ್ರದ ಮುಂದೆ ಪ್ರತಿಭಟಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ

ಮಕರ:- ಆದಾಯ ಮೂಲದಲ್ಲಿ ತುಸು ಕೊರತೆ ಬರಲಿದ್ದು, ಖರ್ಚು ಹೆಚ್ಚಾಗಲಿದೆ. ಹಾಗೆಂದ ಮಾತ್ರಕ್ಕೆ ಚಿಂತಿಸುವ ಅಗತ್ಯವಿಲ್ಲ. ಎರಡನ್ನೂ ಮಧ್ಯಗತಿಯಲ್ಲಿ ಸರಿದೂಗಿಸಲು ಪ್ರಯತ್ನಿಸಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ತುಸು ಅಲಕ್ಷ ತೋರಿದರೆ ಮುಟ್ಟಬೇಕಾದ ಗುರಿ ಬಹಳ ಕಠಿಣವಾಗಬಹುದು. ಮಾಡುವ ಕೆಲಸಗಳಲ್ಲಿ ಆತ್ಮವಿಶ್ವಾಸವಿರಲಿ. ಪ್ರತಿಯೊಂದಕ್ಕೂ ಮತ್ತೊಬ್ಬರನ್ನು ಅವಲಂಬಿಸಬೇಡಿ.

ಕುಂಭ:- ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ತಾಳ್ಮೆಯಿಂದ ಯಶಸ್ಸಿನ ದಾರಿಯಲ್ಲಿ ನಡೆಯುತ್ತಿರುವ ನಿಮ್ಮನ್ನು ಕಂಡು ಕೆಲವರು ಮತ್ಸರ ಪಟ್ಟರೆ ಮತ್ತೆ ಕೆಲವರು ತಕರಾರು ತೆಗೆದು ನಿಮ್ಮೊಂದಿಗೆ ವಾಗ್ವಾದಕ್ಕೆ ಬರಬಹುದು. ಅಂತಹವರೊಂದಿಗೆ ಜಗಳ ಕಾಯದೆ ನಾಜೂಕಿನಿಂದ ವ್ಯವಹರಿಸಿ. ಯಾವುದೇ ಕಾರಣಕ್ಕೂ ನಿಮ್ಮ ಯಶಸ್ಸಿನ ಗುಟ್ಟು ಬಿಟ್ಟುಕೊಡಬೇಡಿ.

ಮೀನ:- ಆರೋಗ್ಯದ ಬಗ್ಗೆ ಉದಾಸೀನ ಮಾಡದೆ ಕಾಲಕಾಲಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಮಾಡಿ. ಕೆಲಸಗಳ ಒತ್ತಡದಿಂದಾಗಿ ಆಲಸ್ಯ ಕಾಣಿಸಿಕೊಳ್ಳುವುದು. ಕುಟುಂಬದಲ್ಲಿ ತುಸು ಗೊಂದಲಗಳು ಕಾಣಿಸಿಕೊಳ್ಳುವವು. ಆಸ್ತಿ ವಿಚಾರದಲ್ಲಿ ಬಂಧುಗಳಿಂದ ತಕರಾರುಗಳು ಬರಲಿದ್ದು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ. ಆಹಾರ ವಿಹಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ.