ಶಿರಸಿ: ಅನೇಕ ದಿನಗಳಿಂದ ಅಲ್ಲಲ್ಲಿ ಕೇಳುತ್ತಿದ್ದ ಕಳ್ಳತನದ ಸುದ್ದಿ ಇದೀಗ ಶಿರಸಿಯಲ್ಲಿ ಭಾರೀ ಸದ್ದು ಮಾಡಿದೆ. ಕಳ್ಳರು ತಮ್ಮ ಕೈ ಚಳಕ ತೋರಿ ಪರಾರಿಯಾಗಿದ್ದು ಇದೀಗ ವರದಿಯಾಗಿದೆ.
ತಾಲೂಕಿನ ಓಣಿ ವಿಘ್ನೇಶ್ವರದ ಈಶ್ವರ ಮತ್ತು ಗಣಪತಿ ದೇವಾಲಯದಲ್ಲಿ ಲಕ್ಷಾಂತರ ರೂ. ಕಳ್ಳತನ ಮಾಡಲಾಗಿದೆ. ಎರಡೂ ದೇವಸ್ಥಾನಗಳ ಕಾಣಿಕೆ ಹುಂಡಿ ಒಡೆದು ಕಳ್ಳರು ಹಣ ದೋಚಿದ್ದಾರೆ.
ಸೋಮವಾರ ಮಧ್ಯರಾತ್ರಿ ಕಳ್ಳತನ ನಡೆದಿದೆ ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ ದೇವಸ್ಥಾನ ಅರ್ಚಕರು ಪೂಜೆಗೆ ಬಂದಾಗ ಕಳ್ಳತನ ವಿಷಯ ತಿಳಿದಿದೆ.
ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.