ಕುಮಟಾ: ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಾಧನೆಯನ್ನು ಸತತವಾಗಿ ಏಳು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಕುಮಟಾದ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ ಈ ವರ್ಷವೂ ಉತ್ತಮ ಸಾಧನೆ ತೋರಿದೆ.

ಪರೀಕ್ಷೆಗೆ ಕುಳಿತ 98 ವಿದ್ಯಾರ್ಥಿಗಳಲ್ಲಿ 96 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ. 97.95 ಫಲಿತಾಂಶ ಬಂದಿದೆ. ಕುಮಾರ ಪ್ರಣೀತ ರವಿರಾಜ ಕಡ್ಲೆ 618 (98.88%) ಪ್ರಥಮ ಸ್ಥಾನ ಪಡೆದು ಕನ್ನಡ ಮಾಧ್ಯಮದಲ್ಲಿ ಉನ್ನತ ಶ್ರೇಯಾಂಕಿತನಾಗಿದ್ದಾನೆ.

RELATED ARTICLES  ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಗೆಲುವಿಗೆ ಶ್ರಮಿಸುತ್ತಿರುವ ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ.
IMG 20190501 WA0001

ವಿಶ್ವಾಸ ವೆಂಕಟೇಶ್ ಪೈ 602 (96.32%), ಗೌತಮಿ ಪರಮಯ್ಯ ಪಟಗಾರ 596 (95.36%), ಸುಪ್ರಸನ್ನ ವೀರೇಂದ್ರ ಗುನಗಾ 577 (92.32%), ಚೈತ್ರಾ ರೋಹಿದಾಸ ನಾಯಕ 575 (92%), ಶ್ರೀಧರ ವಿನಾಯಕ ಭಟ್ಟ 575 (92%), ಪ್ರಜ್ವಲ್ ಶ್ರೀಧರ ಪಟಗಾರ 564 (90.24%), ಸುಬ್ರಹ್ಮಣ್ಯ ವೀರೇಂದ್ರ ಗುನಗಾ 563 (90.08%) 90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿ ಗುಂಪಿನಲ್ಲಿದ್ದಾರೆ. ಇವರ ಸಾಧನೆಗೆ ಕೆನರಾ ಎಜ್ಯುಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷ ವಸುದೇವ ವಾಯ್.ಪ್ರಭು, ಮುಖ್ಯಾಧ್ಯಾಪಕ ಎನ್.ಆರ್.ಗಜು, ಶಿಕ್ಷಕ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

RELATED ARTICLES  ಚಿತ್ರಾಪುರ ಶ್ರೀಗಳಿಂದ ಭಾವಕವಿ ಉಮೇಶ ಮುಂಡಳ್ಳಿಯವರಿಗೆ ಸನ್ಮಾನ