ಮೇಷ:-ಯಾವುದೂ ಬೇಡ ಎಂದು ಮಂಕಾಗಿ ಕುಳಿತುಕೊಳ್ಳುವ ಸ್ಥಿತಿ ನಿಮ್ಮದು. ಆದರೆ ಬಹು ಪರಿವರ್ತನೆಗೆ ಕಾಲ ಉತ್ತಮವಾಗಿದೆ. ನಿರಾಸೆ ಬಿಟ್ಟು ಮುಂದಕ್ಕೆ ಅಡಿ ಇಡಿ. ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಯಾಗುವುದು. ಬೆಂಬಲಿಗರು ನಿಮ್ಮನ್ನು ಭೇದಭಾವವಿಲ್ಲದೆ ಬೆಂಬಲಿಸುವರು.

ವೃಷಭ:- ಯಾರನ್ನು ನಂಬುವುದು, ಯಾರನ್ನು ನಂಬದೇ ಇರುವುದು ಎಂಬ ಗೊಂದಲಕ್ಕೆ ಅತಿ ಶೀಘ್ರದಲ್ಲಿಯೇ ತೆರೆ ಬೀಳಲಿದೆ. ಸಣ್ಣಪುಟ್ಟ ತೊಂದರೆಗಳನ್ನು ಭೂತಗನ್ನಡಿಯಲ್ಲಿ ನೋಡಿದಾಗ ಸಹಜವಾಗಿಯೇ ದೊಡ್ಡದಾಗಿ ಕಾಣುತ್ತದೆ. ಅನಗತ್ಯ ಭಯ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುವುದು. ಈ ಬಗ್ಗೆ ಎಚ್ಚರಿಕೆ ಇರಲಿ.

ಮಿಥುನ:- ಕಷ್ಟ ಯಾರಿಗಿಲ್ಲ ಹೇಳಿ. ಆನೆ ತೂಕ ಆನೆಗೆ, ಆಡಿನ ತೂಕ ಆಡಿಗೆ. ನನ್ನನ್ನು ಹೊರತು ಎಲ್ಲರೂ ಸುಖಿಗಳು ಎನ್ನುವ ಭಾವನೆ ಬಿಡಿ. ನನ್ನಷ್ಟು ಸುಖಿ ಬೇರೆ ಯಾರೂ ಇಲ್ಲ ಎಂದುಕೊಂಡರೆ ಜೀವನದಲ್ಲಿ ಎಲ್ಲವನ್ನೂ ಪಡೆಯಬಲ್ಲಿರಿ. ತಾಳ್ಮೆ, ಸಹನೆ ನಿಮ್ಮ ಮಂತ್ರವಾಗಿರಲಿ.

ಕಟಕ:- ಕೈಗೆ ಕೈ, ದ್ವೇಷಕ್ಕೆ ದ್ವೇಷ ಸಾಧಿಸುವೆನು ಎಂಬ ಹುಂಬತನದ ಪ್ರಯತ್ನ ಬೇಡ. ಶಿಕ್ಷೆ ನೀಡಲು ಕಾನೂನಿನ ವ್ಯವಸ್ಥೆ ದೇಶದಲ್ಲಿದೆ. ಕಾನೂನನ್ನು ಕೈಗೆ ಎತ್ತಿಕೊಳ್ಳುವುದು ಸೂಕ್ತವಲ್ಲ. ಎಲ್ಲವೂ ಸುಗಮವಾಗುವುದು. ತಾಳ್ಮೆಯಿಂದಿರಿ.

RELATED ARTICLES  ರೈತರಿಗಾಗಿ ಕಾಳುಮೆಣಸು ತರಬೇತಿ ಕಾರ್ಯಗಾರ

ಸಿಂಹ:- ನೀವು ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲಾ ಸಮಯದಲ್ಲೂ ಸರಿ ಇರಲಾರವು ಎಂಬುದನ್ನು ಮನಗಾಣುವಿರಿ. ಆದಷ್ಟು ಗುರು ಹಿರಿಯರ ಹಿತವಚನಗಳನ್ನು ಆಲಿಸಿ. ಇಲ್ಲವೆ ಹಿತೈಷಿ ಬಂಧುಗಳ ಸಲಹೆ ಪಡೆದು ಮುಂದೆ ಹೆಜ್ಜೆ ಇಡಿ. ಯಶಸ್ಸು ನಿಮ್ಮದಾಗುವುದು.

ಕನ್ಯಾ:- ಹಲವಾರು ಮಂದಿಯನ್ನು ಭೇಟಿ ಮಾಡುವಿರಿ. ಮಹತ್ತರ ವಿಷಯದ ಬಗ್ಗೆ ಚರ್ಚೆ ನಡೆಯುವುದು. ಆದರೆ ಅದು ಕಾರ್ಯರೂಪಕ್ಕೆ ಬರಲು ವಿಳಂಬವಾಗುತ್ತಿರುವುದು ನಿಮಗೆ ಬೇಸರ ತರಿಸುವ ಸಾಧ್ಯತೆ ಇದೆ. ಹರಿ ನಿನ್ನೊಲುಮೆ ಆಗುವತನಕ ಅರಿತು ಸುಮ್ಮನಿರುವುದು ಲೇಸು ಎಂಬುದನ್ನು ತಿಳಿಯಿರಿ.

ತುಲಾ:- ನಿಮ್ಮನ್ನು ಸುತ್ತ ಹತ್ತು ನಿಟ್ಟಿನಿಂದ ಜನರು ಪರೀಕ್ಷಿಸುತ್ತಿದ್ದಾರೆ. ಮಾಡುವ ಕೆಲಸ 2 ಕೈಗಳಿಂದಾದರೂ ನೋಡುವ ಕಣ್ಣುಗಳು ಹತ್ತಾರು ಇರುತ್ತವೆ. ಹಾಗಾಗಿ ಜಾಗರೂಕತೆಯಿಂದ ಕೆಲಸ ಮಾಡಿ. ದೈವಕೃಪೆಯಿಂದ ಎಲ್ಲಾ ಕೆಲಸಗಳು ಪ್ರಗತಿಯತ್ತ ಸಾಗುವವು.

ವೃಶ್ಚಿಕ:- ಪ್ರಗತೀಶೀಲರ ಹಾಗೆ ಹೆಜ್ಜೆ ಇರಿಸುವ ನಿಮ್ಮ ನಿರ್ಧಾರ ಸರಿಯಾದುದೆ. ಆದರೆ ಈ ಹಿಂದೆ ಸಹಾಯ ಮಾಡಿದ ಜನರನ್ನು ಮರೆಯಬಾರದು. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬ ಕವಿವಾಣಿ ಮರೆಯದೇ ನಿಮ್ಮ ಜೊತೆಯಲ್ಲಿ ಎಲ್ಲರನ್ನು ಕರೆದುಕೊಂಡು ಹೋಗಬೇಕಿದೆ.

RELATED ARTICLES  ನಿಂದಕನಿಗೆ ನಮನ ( ಕವನ - ಉಮೇಶ ಮುಂಡಳ್ಳಿ)

ಧನುಸ್ಸು:- ಮನೋ ಸಂಕಲ್ಪದಲ್ಲಿ ದಾಢ್ರ್ಯತೆ ಹೊಂದುವುದು ಅನಿವಾರ್ಯ. ಯಾವುದು ಸಲೀಸಾಗಿ ದೊರೆಯುವುದಿಲ್ಲ ಎಂಬ ಮಾತು ಸರ್ವಕಾಲಿಕ ಸತ್ಯ. ಬೆವರು ಸುರಿಸಿ ದುಡಿದ ಹಣದ ಮಹತ್ವವನ್ನು ಬಲ್ಲವನೇ ಬಲ್ಲ.

ಮಕರ:- ಸಕಲ ಇಷ್ಟಾರ್ಥಗಳ ಸಿದ್ಧಿಗೆ ದಾರಿಯಾಗುವುದು. ಮನೋ ನಿಯಾಮಕ ರುದ್ರದೇವರನ್ನು ಅನನ್ಯ ಭಕ್ತಿಯಿಂದ ಭಜಿಸಿ. ಶಿವ ಒಲಿದರೆ ಭಯವಿಲ್ಲ. ಶಿವನಾಮಕೆ ಸಾಟಿ ಬೇರಿಲ್ಲ ಎಂಬುದು ನಿಮಗೆ ಅರಿವಾಗುವುದು.

ಕುಂಭ:- ಅನೇಕ ಕೆಲಸಗಳನ್ನು ಸೂಕ್ತ ಯೋಜನೆಗಳೊಂದಿಗೆ ಸಿದ್ಧವಾಗಿ ಇಟ್ಟುಕೊಂಡಿರುವಿರಿ. ಇದಕ್ಕೆ ನಿಮ್ಮ ಮೇಲಧಿಕಾರಿಗಳ ಸಲಹೆ ಸಹಕಾರಗಳು ದೊರೆಯಲಿವೆ. ನಿಮ್ಮ ಮನೋಕಾಮನೆಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳುವವು.

ಮೀನ:- ನೀರು ಕುಡಿದಷ್ಟು ಸುಲಭದ ಕೆಲಸ ಹೌದಾದರೂ ಪ್ರಾರಂಭಿಕ ಹಂತದ ತಯಾರಿಯನ್ನು ಮಾತ್ರ ನೀವು ಅಲಕ್ಷ್ಯ ಮಾಡಬಾರದು. ದುರ್ಗಾ ಜಪ ಮಾಡಿ. ನಿಮ್ಮ ಕಾಯಕವನ್ನು ಶ್ರದ್ಧೆಯಿಂದ ಮಾಡಿ.