ಮದ್ಯಮವರ್ಗದಲ್ಲಿ ಬೆಳೆದುಬಂದ ಮಣಿಕಂಠ ಮಿಸ್ಟರ್ ಏಷಿಯಾ ದೇಹದಾರ್ಢ್ಯತೆ ಸ್ಪರ್ಧೆಯಲ್ಲಿ 3 ನೇ ಸ್ಥಾನ ಪಡೆದ  ಶಿರಶಿಯ  ಖ್ಯಾತ ದೇಹದಾರ್ಢ್ಯ ಪಟು.

ಡೆಲ್ಲಿಯಲ್ಲಿ ನಡೆದ ಮಿಸ್ಟರ್ ಏಷಿಯಾ ದೇಹದಾರಢ್ಯತೆ ಸ್ಪರ್ದೆಯಲ್ಲಿ 60 kg ವಿಭಾಗದಲ್ಲಿ ಮೂರನೇ ಸ್ಥಾನಗಳಿಸಿ, ಉತ್ತರಕನ್ನಡ ಜಿಲ್ಲೆಯನ್ನು ಏಷ್ಯಖಂಡದಲ್ಲಿ ಗುರುತಿಸುವಂತೆ ಮಾಡಿದ್ದಾರೆ.ಮಣಿಕಂಠ ಮಿಸ್ಟರ್ ಉತ್ತರಕನ್ನಡ ಪ್ರಸಸ್ತಿಯನ್ನು ಎರಡುಬಾರಿ,  ಮಿಸ್ಟರ್ ಕರ್ನಾಟಕ  ಪ್ರಸಶ್ತಿಯನ್ನು ಎರಡುಬಾರಿ ಗೆದ್ದಿದ್ದು,   ಮಿಸ್ಟರ್ ಸೌತ್ ಇಂಡಿಯಾ ಗೋಲ್ಡ ಮೆಡಲ್ 2019 ಪಡೆದಿದ್ದು ಇನ್ನು ಹೆಚ್ಚಿನ ಪ್ರಯತ್ನದಲ್ಲಿದ್ದು ವಿಸ್ಟರ್ ವರ್ಡ ಆಗಬೇಕೆನ್ನುವ ಆಸೆ ಹೊಂದಿದ್ದಾರೆ.ಇವರ ತಂದೆಯನ್ನು ಬಿಟ್ಟು ಯಾರದೇ ಸಹಾಯ ಸಿಗದಿರುವುದು ಇವರ ಹಿನ್ನಡೆಗೆ ಕಾರಣವಾಗಿದೆ ಅನ್ನುವುದು ಇವರ ಅಭಿಪ್ರಾಯ.

RELATED ARTICLES  ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್ ನ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ.

ಇವರು ಶಿರಶಿಯಲ್ಲಿ ತಮ್ಮದೇ ಆದ ಒಂದು ಚಿಕ್ಕ ಜಿಮ್ ಇಟ್ಟುಕೊಂಡಿದ್ದು,ಜಿಮ್ ಟ್ರೇನರ್ ಆಗಿ ಇಲ್ಲಿಯೇ ಇವರ ಪ್ರಯತ್ನವನ್ನು ಮುಂದುವರಿಸುತ್ತಾ,ಇದರಿಂದನೇ ಜೀವನ ನಡೆಸುತ್ತಿದ್ದಾರೆ.ತಂದೆಯೇ ಆದಾರವಾಗಿದ್ದ ಇವರಿಗೆ ಈಗ ತಂದೆಯ ಶಸ್ತ್ರ ಚಿಕಿತ್ಸೆಯ ಕಾರಣದಿಂದ ತಂದೆಯೂ ಮನೆಯಲ್ಲಿಯೇ ಕೂರುವಂತಾಗಿದೆ. ಹಾಗಾಗಿ ಮುಂದೆ ತನ್ನ ಆಸೆ ಈಡೇರುವುದೇ ಎಂಬ ಪ್ರಶ್ನೆ ಕಾಡತೊಡಗಿದೆ.2009 ರಿಂದ ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಫಲ ಸಿಗುವ ಸಮಯ ಬಂದಾಗ  ಯಾರದು ಸಹಾಯ ಸಿಗದಂತಾಗಿದೆ.ಇವರು ಮಿಸ್ಟರ್ ವರ್ಡ ಆಗಬೇಕೆನ್ನುವ ಆಸೆ ಹೊಂದಿದ್ದು, ಇವರ ಆಸೆ ಈಡೇರಲಿ,ಮತ್ತು ಇವರೊಂದಿಗೆ ಯಾರಾದರು ಕೈಜೋಡಿಸಿ ಇವರ ಮುಂದಿನ ಪ್ರಯತ್ನ ಯಶಶ್ವಿಯಾಗಲಿ ಎಂದು ಹಾರೈಸೋಣ.

RELATED ARTICLES  ಸರಕಾರದ ಕೋವಿಡ್ ಮಾರ್ಗ ಸೂಚಿಯಂತೆ ಆರಾಧನಾ ಮಹೋತ್ಸವ : ಸಾರ್ವಜನಿಕ ಕಾರ್ಯಕ್ರಮ ಇಲ್ಲ

ಪ್ರಯತ್ನ ಪಟ್ಟು ಮುನ್ನಡೆದು ನಮ್ಮ ಜಿಲ್ಲೆಗೆ ಹೆಸರು ತಂದಿರುವ ನಿಮಗೆ  ಅಭಿನಂದನೆ.

ಇವರ ಮುಂದಿನ ಪ್ರಯತ್ನಕ್ಕೆ ಯಾರಾದರು ಇವರಿಗೆ ಸಹಾಯ ಮಾಡಲು ಇಚ್ಚಿಸುವವರು ನೇರವಾಗಿ 7204630477 ಗೆ ಕರೆಮಾಡಿ ಸಂಪರ್ಕಿಸಿಬಹುದಾಗಿದೆ.ಪ್ರೊತ್ಸಾಹ ಮಾಡಲು ಇಚ್ಚಿಸುವವರು ನೇರವಾಗಿ ಅವರ ಖಾತೆಗೂ ಹಣ ಜಮಾ ಮಾಡಬಹುದು.ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ಮಣಿ.
A/no-Acount no.20253963724
Manikanth Basavaraj murdeshwar
IFSC.SBIN0000917
SBI SIRSI