ಕುಮಟಾ: ಮಹಾತ್ಮಗಾಂಧಿ ವಿಧ್ಯಾವರ್ದಕ ಸಂಘ ಹಿರೇಗುತ್ತಿ ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯು ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 84 ಫಲಿತಾಂಶವನ್ನು ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ.
ಪರೀಕ್ಷೆಗೆ ಕುಳಿತ 98 ವಿದ್ಯಾರ್ಥಿಗಳಲ್ಲಿ 82 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪ್ರಥಮ ಸ್ಥಾನವನ್ನು ಕುಮಾರ ವೆಂಕಟೇಶ ಜಟ್ಟಿ ಪಟಗಾರ (95.68) ದ್ವೀತಿಯ ಸ್ಥಾನವನ್ನು ಕುಮಾರ ಶಿವಗಣೇಶ ಸಂತೋಷ ಮಹಾಲೆ (94.56) ತೃತೀಯ ಸ್ಥಾನವನ್ನು ಕುಮಾರಿ ಸಹನಾ ಗೋಳಿ ಗೌಡ (93.28) ಪಡೆದಿರುತ್ತಾರೆ. ಈ ಮೂಲಕ ಶಾಲೆಗೆ ಆಡಳಿತ ಮಂಡಳಿಯವರಿಗೆ ಪಾಲಕರಿಗೆ ಹಾಗೂ ಊರಿಗೆ ಕೀರ್ತಿ ತಂದಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್ ನಾಯಕ ಹಾಗೂ ಸದಸ್ಯರು ಹೈಸ್ಕೂಲ್ ಮುಖ್ಯಾಧ್ಯಾಪಕ ಶ್ರೀ ರೋಹಿದಾಸ ಎಸ್ ಗಾಂವಕರ ಹಾಗೂ ಶಿಕ್ಷಕ ವೃಂದದವರು, ಬೋಧಕೇತರ ಸಿಬ್ಬಂದಿ ವರ್ಗದವರು, ಹಿರೇಗುತ್ತಿ ಗ್ರಾಮಪಂಚಾಯತ ಅಧ್ಯಕ್ಷರಾದ ಸಣ್ಣಪ್ಪ ಮಾರುತಿ ನಾಯಕ ಹಾಗೂ ಸದಸ್ಯರು ಬ್ರಹ್ಮಜಟಕ ಯುವಕಸಂಘದ ಅಧ್ಯಕ್ಷರಾದ ರಾಜು ಕೃಷ್ಣ ಗಾಂವಕರ ಹಾಗೂ ಪದಾಧಿಕಾರಿಗಳು ಹಾಗೂ ಊರ ನಾಗರೀಕರು ಅಭಿನಂದಿಸಿದ್ದಾರೆ.