ಕುಮಟಾ: ಇಲ್ಲಿಯ ಕೆನರಾ ಎಜ್ಯುಕೇಶನ್ ಸೊಸೈಟಿಯ ಅಂಗಸಂಸ್ಥೆ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇ.96.77 ಆಗಿದ್ದು, ಪರೀಕ್ಷೆಗೆ ಬರೆದ 62 ವಿದ್ಯಾರ್ಥಿಗಳಲ್ಲಿ 60 ವಿದ್ಯಾರ್ಥಿಗಳು ಉತ್ತಮ ನಿರ್ವಹಣೆ ತೋರಿದ್ದಾರೆ. ಜಿಲ್ಲೆಯ ಉತ್ತಮ ಪ್ರೌಢಶಾಲೆಗಳಲ್ಲೊಂದಾದ ಈ ಪ್ರೌಢಶಾಲೆ ಕಳೆದ ಹನ್ನೆರಡು ವರ್ಷಗಳಿಂದ ಅತ್ಯುತ್ತಮ ಸಾಧನೆ ಮಾಡಿರುವುದು ಹೆಗ್ಗಳಿಕೆಯಾಗಿದೆ.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 102 ಜನರಿಗೆ ಕರೋನಾ ಪಾಸಿಟಿವ್

ಕುಮಾರಿ ಜಿ.ಆರ್.ಸಂಪ್ರೀತಿ 607 (ಶೇ.97.12), ಕುಮಾರಿ ಯುಕ್ತ ಎಸ್.ನಾಯ್ಕ 599 (ಶೇ.95.84) ಕುಮಾರ್ ವಿನೀತ್ ಜಿ.ಪೈ 595 (ಶೇ95.20) ಕುಮಾರಿ ತನುಶ್ರೀ ಆರ್. ಕುಮಟಾ 584 (ಶೇ.93.44), ಕುಮಾರ್ ವಿನೀತ್ ಪಿ.ಮಣಕೀಕರ 568 (ಶೇ.90.88) ಅಂಕಗಳಿಸಿ ಮೊದಲ ಐದು ಶ್ರೇಯಾಂಕಿತರಾಗಿದ್ದಾರೆ.

RELATED ARTICLES  ಕುಮಟಾದಲ್ಲಿ ಕೊರೋನಾ ಕೇಕೆ : ಬರೋಬ್ಬರಿ 30 ಜನರಲ್ಲಿ ಇಂದು ಕೊರೋನಾ ಪಾಸಿಟೀವ್..!

ಅವರ ಸಾಧನೆಗೆ ಕೆನರಾ ಎಜುಕೇಶನ್ ಸೊಸೈಟಿ ಕಾರ್ಯಾಧ್ಯಕ್ಷ ವಸುದೇವ ವಾಯ್.ಪ್ರಭು, ಮುಖ್ಯಾಧ್ಯಾಪಕ ವಿನಾಯಕ ಶಾನಭಾಗ, ಶಿಕ್ಷಕ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.