ಮೇಷ:- ಎಲ್ಲಾ ವಿಚಾರಗಳಲ್ಲಿ ಗೆಲುವು ನಿಮ್ಮದೆ ಆಗುವುದು. ಆದರೆ ಅದಕ್ಕೆ ಕ್ರಮಬದ್ಧ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುವುದು. ನಿಮ್ಮ ಆಶಾವಾದವು ನಿಮ್ಮ ಕಾರ್ಯಯೋಜನೆಗೆ ಸಹಕಾರಿಯಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ವೃಷಭ:- ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯದ ಅರಿವು ಇದ್ದರೂ ಎಲ್ಲರನ್ನು ನಂಬಿ ಎಲ್ಲರೂ ವಿಶ್ವಾಸಿಗರು ಎಂದು ಭ್ರಮೆಗೆ ಒಳಗಾಗುವಿರಿ. ಇದರಿಂದ ನಿಮ್ಮ ಮನಸ್ಸಿಗೆ ಘಾತವಾಗುವುದು. ಮಾತಾ ದುರ್ಗಾದೇವಿಯನ್ನು ಸ್ಮರಿಸಿ.
ಮಿಥುನ:- ಎಲ್ಲಾ ದಿಕ್ಕುಗಳಲ್ಲಿಯೂ ನೀವು ಹಲವು ಒತ್ತಡಗಳನ್ನು ಎದುರಿಸಬೇಕಾಗುವುದು. ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ. ಕುಲದೇವರನ್ನು ಸ್ಮರಣೆ ಮಾಡಿ. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವರು.
ಕಟಕ:- ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎನ್ನುವಂತೆ ಆಗಬಾರದು ಎಂದರೆ ಮೈಯೆಲ್ಲಾ ಕಣ್ಣಾಗಿ ಆಗುವ ಕೆಲಸಗಳತ್ತ ಗಮನ ಹರಿಸಬೇಕು. ಇಲ್ಲದೆ ಇದ್ದಲ್ಲಿ ಬಂದ ಮಹತ್ತರ ಅವಕಾಶ ತಪ್ಪಿಹೋಗುವ ಸಾಧ್ಯತೆ ಇದೆ.
ಸಿಂಹ:- ಹೊಸ ಹೊಸ ಯೋಜನೆಗಳು ನಿಮ್ಮ ತಲೆಯಲ್ಲಿ ಸುಳಿದು ಮಾಯವಾಗುವವು. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶಿಸ್ತುಬದ್ಧತೆ ಪ್ರದರ್ಶಿಸಬೇಕಾಗುವುದು. ಸಾಮಾಜಿಕವಾಗಿ ಎಲ್ಲರಿಂದ ಗುರುತಿಸಿಕೊಳ್ಳುವಿರಿ.
ಕನ್ಯಾ:- ನಿಮ್ಮ ಕಾರ್ಯಯೋಜನೆಗಳು ಸಫಲವಾಗುವುದನ್ನು ತಪ್ಪಿಸಲು ಕೆಲವರು ಹೊಂಚುಹಾಕಿ ಕಾಯುತ್ತಿರುವರು. ಆದರೆ ದೈವಬಲವಿರುವವರಿಗೆ ಯಾರ ಭಯವೇನು? ನಿಮ್ಮ ಕಾರ್ಯಯೋಜನೆಗಳು ಭಗವಂತನ ದಯೆಯಿಂದ ಸಫಲಗೊಳ್ಳುವವು.
ತುಲಾ:- ಪೂರ್ವಾಪರ ಯೋಚನೆ ಮಾಡದೆ ದಿಢೀರನೆ ಮಾಡುತ್ತಿರುವ ಉದ್ಯೋಗಕ್ಕೆ ರಾಜೀನಾಮೆ ನೀಡದಿರಿ. ಒಂದು ವೇಳೆ ರಾಜೀನಾಮೆ ನೀಡಿದಲ್ಲಿ ಕಷ್ಟ ಎದುರಿಸಬೇಕಾಗುವುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ.
ವೃಶ್ಚಿಕ:- ಹಲವು ದಿನಗಳಿಂದ ಕಂಡ ಕನಸು ನನಸಾಗುವ ಸಾಧ್ಯತೆ ಇದೆ. ಎಲ್ಲಾ ಮೂಲಗಳಿಂದ ಶುಭವಾರ್ತೆಯನ್ನು ಕೇಳುವಿರಿ. ಮನೆಯ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು.
ಧನುಸ್ಸು:- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ವಿದೇಶದಿಂದ ಬರುವ ಉದ್ಯೋಗದ ವಿಚಾರವಾಗಿ ತೀರ್ಮಾನ ಕೈಗೊಳ್ಳುವಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ. ವಿದೇಶ ಪ್ರಯಾಣ ನಿಮಗೆ ಲಾಭಕಾರಿಯಾಗುವುದಿಲ್ಲ.
ಮಕರ:- ಸಂಸಾರ ಗುಟ್ಟು ವ್ಯಾಧಿ ರಟ್ಟು ಎನ್ನುವಂತೆ ಸಾಂಸಾರಿಕ ಜೀವನದ ಒಳತುಮುಲಗಳನ್ನು ಹೊರಗೆ ಹಾಕುವುದು ಸೂಕ್ತವಲ್ಲ. ಮನೆಯೊಳಗಿನ ವಿಚಾರವನ್ನು 4 ಗೋಡೆಗಳ ಮಧ್ಯದಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಿ.
ಕುಂಭ:- ದೂರದ ಊರಿನ ಪ್ರಯಾಣ ದಿಢೀರನೆ ನಿರ್ಣಯವಾಗುವುದು. ಇದರಿಂದ ದಿನನಿತ್ಯದ ಕಾರ್ಯಗಳಿಗೆ ಹಿಂಚಲನೆ ಉಂಟಾಗುವುದು. ಆದರೂ ಗುರು ಹಿರಿಯರ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ.
ಮೀನ:- ಮಹತ್ತರ ಕಾರ್ಯವನ್ನು ಹಮ್ಮಿಕೊಳ್ಳಲು ಯೋಚಿಸಿರುವಿರಿ. ಆದರೆ ಅದನ್ನು ಆರಂಭಿಸಲು ಸೂಕ್ತಕಾಲವಲ್ಲ. ಸ್ವತಂತ್ರವಾಗಿ ನಿರ್ಧಾರ ತಳೆಯದೇ ಬಂಧುಮಿತ್ರರ ಸಲಹೆಯನ್ನು ಸ್ವೀಕರಿಸಿ.