ಕುಮಟಾ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಉತ್ತೀರ್ಣಳಾದ ನಾಗಾಂಜಲಿ ಪರಮೇಶ್ವರ ನಾಯ್ಕ ಮನೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ ಅರವಿಂದ ಕರ್ಕಿಕೋಡಿ ಭೇಟಿ ನೀಡಿ ಅವಳನ್ನು ಸನ್ಮಾನಿ ಅಭಿನಂದಿಸಿದರು.
ನಾಗಾಂಜಲಿಯನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಅಪೂರ್ವ ಸಾಧನೆಗೈದ ನಾಗಾಂಜಲಿ ಈ ಜಿಲ್ಲೆಯ ನಿತ್ಯಮಿಂಚು. ಓದಿದ್ದನ್ನು ತುಂಬ ನಾಜೂಕಾಗಿ, ಅಚ್ಚುಕಟ್ಟಾಗಿ ಪರೀಕ್ಷೆಯಲ್ಲಿ ಬರೆಯಬೇಕಾದರೆ ಸೃಜನಶೀಲತೆಯ ಭಾಷೆ ಕೂಡ ಮುಖ್ಯ. ಅಂಥ ಪ್ರತಿಭೆಯನ್ನು ನಾಗಾಂಜಲಿ ಅರಗಿಸಿಕೊಂಡಿದ್ದಾಳೆ. ಅವಳಿಗೆ ಓದಿನ ಬಗ್ಗೆ ಮಹಾತ್ವಾಕಾಂಕ್ಷೆ, ಶ್ರದ್ಧೆ ಇತರ ವಿದ್ಯಾರ್ಥಿಗಳಿಗೆ ಮಾದರಿ. ಅವಳ ಸಾಧನೆಯ ಹಿಂದಿರುವ ಶಿಕ್ಷಕವೃಂದ, ಪಾಲಕರು ಕೂಡ ಅಭಿನಂದನಾರ್ಹರು ಎಂದರು.
ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ನಾಗಾಂಜಲಿಗೆ ಕನ್ನಡ ಬಾವುಟ ನೀಡಿ ಅಭಿನಂದಿಸಿ ಸಾಹಿತ್ಯದತ್ತಲೂ ಹೆಚ್ಚು ಗಂಭೀರವಾಗಿ ತೊಡಗಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕ, ತಾಲೂಕು ಕ.ಸಾ.ಪ ಪದಾಧಿಕಾರಿಗಳಾದ
ಎಂ.ಎನ್.ನಾಯ್ಕ, ಪ್ರೊ. ರಾಘವೇಂದ್ರ ಶೆಟ್ಟಿ, ರಾಜೇಶ್ ಶೇಟ್, ಸುರೇಶ ನಾಯ್ಕ, ,ನಾಗರಾಜ ನಾಯ್ಕ ಚಿತ್ರಗಿ, ನಾಗಾಂಜಲಿಯ ತಂದೆ ಪರಮೇಶ್ವರ ನಾಯ್ಕ, ತಾಯಿ ಚೇತನಾ ಪರಮೇಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.