ಕುಮಟಾ: ಇಲ್ಲಿಯ ಕಡ್ಲೆ ಗ್ರಾಮದ ಡಾ. ರವಿರಾಜ ಕಡ್ಲೆ ಅವರ ಮಗ ಪ್ರಣೀತ್, ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಓದಿ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿ (೬೧೮/೬೨೫) ಅಂಕ ಗಳಿಸಿ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಜಿಲ್ಲೆಗೆ ಮೊದಲ ಸ್ಥಾನ ಪಡೆದುದಲ್ಲದೇ ರಾಜ್ಯಮಟ್ಟದಲ್ಲೂ ಮುಮ್ಮೊದಲ ಶ್ರೇಯಾಂಕಿತನಾಗಿ ಗಮನಸೆಳೆದಿದ್ದಾನೆ.


ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಶಿಕ್ಷಕವರ್ಗದವರು ಕಡ್ಲೆಯ ಅವನ ನಿವಾಸಕ್ಕೆ ತೆರಳಿ ಪ್ರಣೀತ ಕುಟುಂಬ ಸದಸ್ಯರೊಂದಿಗೆ ಸಂಭ್ರಮ ಹಂಚಿಕೊಂಡರು. ಮುಖ್ಯ ಶಿಕ್ಷಕ ಎನ್.ಆರ್.ಗಜು ಆಡಳಿತ ಮಂಡಳಿ ಹಾಗೂ ಶಾಲಾ ವತಿಯಿಂದ ಸಿಹಿ ತಿನಿಸಿ ಸನ್ಮಾನಿಸಿ ಗೌರವಿಸಿದರು. ಶಿಕ್ಷಕರಾದ ಲಕ್ಷ್ಮಣ ಅಂಬಿಗ, ವಿಷ್ಣು ಭಟ್ಟ, ಸುರೇಶ ಪೈ, ಅನಿಲ್ ರೊಡ್ರಗೀಸ್, ಕಿರಣ ಪ್ರಭು, ಪ್ರದೀಪ ನಾಯ್ಕ, ಪ್ರಶಾಂತ ಗಾವಡಿ ತಂಡದಲ್ಲಿದ್ದರು. ಪ್ರಣೀತ್ ತಂದೆ ಮತ್ತು ಅಜ್ಜನ ಅಭಿಲಾಷೆಯಂತೆ ಎಲ್ಲ ಅನುಕೂಲಗಳಿದ್ದಾಗಲೂ ಇಂಗ್ಲಿಷ ಮಾಧ್ಯಮ ಶಾಲೆಗೆ ಸೇರದೇ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಅದ್ಭುತ ಸಾಧನೆ ಮೆರೆದಿದ್ದಾನೆ. ಕುಮಾರ ಅದ್ವ್ಯೈತ್ ಸಹ ತನ್ನ ಅಣ್ಣನಂತೆ ಸರಕಾರಿ ಪ್ರಾಥಮಿಕ ಶಾಲೆ ಕಡ್ಲೆಯಲ್ಲಿ ಅಭ್ಯಸಿಸಿ ಈಗ ಎಂಟನೇ ತರಗತಿಗೆ ಚಿತ್ರಿಗಿ ಪ್ರೌಢಶಾಲೆಗೆ ಪ್ರವೇಶ ಪಡೆದಿದ್ದಾನೆ. ಅಲ್ಲದೇ ಅವನ ತಂಗಿ ನಿವೇದಿತಾಳೂ ಇದೇ ಶಾಲೆಗೆ ಸೇರುವ ಇಂಗಿತ ಹೊಂದಿರುತ್ತಾಳೆ.

RELATED ARTICLES  ಗ್ರಾಹಕರ ಮಾಹಿತಿ ಕದ್ದ ಸೈಬರ್‌ ವಂಚಕರು!


ರ‍್ಯಾಂಕ್ ಪದ್ಧತಿ ಕೈಬಿಟ್ಟಾಗಲೂ, ಅದರಿಂದ ಹೊರಬರದಿರುವುದು ಅಸಾಧ್ಯವೆಂಬಂತೆ ಬಿಂಬಿಸಲ್ಪಟ್ಟಿರುವುದು ಎಷ್ಟು ನಿಜವೋ ಅಷ್ಟೇ ಈ ದಿನಗಳಲ್ಲೂ ಅನುತ್ತೀರ್ಣರಾದವರು ಎಲ್ಲ ಕಳಕೊಂಡಂತೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಷಾದನೀಯ. ರಾಜ್ಯಮಟ್ಟದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಶ್ರೇಯಾಂಕಿತರಾದವರನ್ನು ಪ್ರತ್ಯೇಕವಾಗಿ ಗುರುತಿಸದಿರುವುದರಿಂದ ಸಾಮಾಜಿಕ ಹಾಗೂ ಕನ್ನಡಪರ ಸಂಘಟನೆಗಳ ಗಮನಕ್ಕೆ ಬಾರದೇ ಕನ್ನಡತನ ಮರೆಯಾಗುತ್ತಿದೆ”
-ಗಜಾನನ ಸುಬ್ರಾಯ ಭಟ್ಟ, ಅಜ್ಜ


“ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಶಿಕ್ಷಕವೃಂದ ತೋರುವ ಪ್ರೀತಿ ಅಭಿಮಾನ ಹಾಗೂ ಕಾಳಜಿ ಯಾವತ್ತೂ ಮರೆಯಲಾಗದು. ಒಂದು ಆದರ್ಶ ಶಿಕ್ಷಣ ಸಂಸ್ಥೆಯ ಎಲ್ಲ ಗುಣಗಳೂ ಈ ಶಾಲೆಯಲ್ಲಿದೆ. ಒತ್ತಡ ರಹಿತ ಅಭ್ಯಾಸಕ್ಕೆ ಮಗ ಒಗ್ಗಿಕೊಂಡು ಪರೀಕ್ಷಾ ದಿನಗಳಲ್ಲೂ ಕೂಡ ತನ್ನ ಸಹಜ ಬ್ಯಾಡ್ಮಿಂಟನ್ ಆಟದೊಂದಿಗೆ ಯಾವುದೇ ಅಂಜಿಕೆ, ಅಂಕವ್ಯಾಮೋಹದ ಅಳುಕೂ ಇಲ್ಲದೇ ಬರೆಯುತ್ತಿದ್ದ. ಎಂದಿಗೂ ಭಯಮುಕ್ತ, ಝೀರೋ ಪ್ರೆಸರ್ ವಾತಾವರಣದಲ್ಲಿ ಮಗ ಹೊಸದನ್ನು ಸಾಧಿಸುತ್ತಾನೆ ಎಂಬ ಭರವಸೆ ನನಗಿದೆ. ಲಕ್ಷಾಂತರ ರ‍್ಯಾಂಕ್ ವಿಜೇತರು ಎಂಎನ್‌ಸಿಗಳಲ್ಲಿ ಕಣ್ಮರೆಯಾಗುತ್ತಿರುವ ಸಂದರ್ಭದಿಂದ ನನ್ನ ಮಗ ದೂರವಿದ್ದು ರಾಷ್ಟçಸೇವೆಗೆ ಕಂಕಣನಾಗಿ ಒಳ್ಳೆಯ ನಾಗರಿಕ ಆದರಷ್ಟೇ ಸಾಕು” _ಡಾ.ರವಿರಾಜ ಕಡ್ಲೆ, ತಂದೆ

RELATED ARTICLES  ಉದ್ಯೋಗ ಮೇಳಕ್ಕೆ ಶಾಸಕರಿಗೇ ಇರಲಿಲ್ಲ ಆಹ್ವಾನ? ಶಾಸಕ ಸೈಲ್ ಫುಲ್ ಗರಂ


“ಮುಂದೆ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ವಿಜ್ಞಾನ ಓದಲು ಬಯಸಿದ್ದೇನೆ. ಸಂಶೋಧಕ ಡಾಕ್ಟರ್ ಆಗಿ ಮಾತೃಭೂಮಿಯಲ್ಲಿಯೇ ಸೇವೆ ಸಲ್ಲಿಸುವ ಗುರಿ ಹೊಂದಿಿರುವ -ಪ್ರಣೀತ್ ಕಡ್ಲೆ,


“ನನ್ನ ಸೇವಾವಧಿಯಲ್ಲಿಯೇ ಕಂಡ ಅತ್ಯಂತ ಸಂಸ್ಕಾರಯುತ, ವಿನಯವಂತ, ವಿಧೇಯವಂತ, ಗುಣವಂತ ವಿದ್ಯಾರ್ಥಿ. ಎಲ್ಲರ ಮೆಚ್ಚುಗೆಗೆ ಪಾತ್ರರಾದವ. ಗುರುವೃಂದದ ಬಗ್ಗೆ ಭಕ್ತಿ-ಗೌರವ. ಮಿತಭಾಷಿಯಾದರೂ ಭಾಷಣ, ಚರ್ಚೆ, ವಿಜ್ಞಾನ ಸಂಶೋಧನೆ, ರಸಪ್ರಶ್ನೆ, ವಿವಿಧ ಆಟೋಟ ಸ್ಪರ್ಧೆಗಳಲ್ಲೂ ಪಾಲ್ಗೊಂಡು ಅನನ್ಯ ಪ್ರತಿಭೆಯನ್ನು ಪ್ರದರ್ಶಿಸಿದ ಈತನಿಗೆ ಉಜ್ವಲ ಭವಿಷ್ಯವಿದೆ”
-ಎನ್.ಆರ್.ಗಜು, ಮುಖ್ಯಾಧ್ಯಾಪಕ


“ಸದಾ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುತ್ತಾ, ಸಂಸ್ಕಾರ ಕಲಿಸುತ್ತಾ, ಪ್ರೀತಿ-ಮಮತೆ ತೋರುತ್ತಾ ಬಂದ ಪರಿ ಮಾತೃಹೃದಯವನ್ನು ತಟ್ಟಲು ಕಾರಣರಾದ ಮುಖ್ಯಾಧ್ಯಾಪಕ, ಶಿಕ್ಷಕಬಳಗಕ್ಕೆ ಸದಾ ಋಣಿಯಾಗಿರುವೆ”
-ಉಷಾ ರವಿರಾಜ ಕಡ್ಲೆ, ತಾಯಿ.