ಕಾರವಾರ : ಕಳೆದ ಡಿಸೆಂಬರ್ 15ರಂದು ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ನ ಅವಶೇಷಗಳು ಮಹಾರಾಷ್ಟ್ರದ ಮಾಲ್ವಾನ್ ಬಳಿ ಪತ್ತೆಯಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 13ರಂದು ಉಡುಪಿಯ ಮಲ್ಪೆ ಬೀಚ್ನಿಂದ 7 ಜನ ಮೀನುಗಾರರು ಸುವರ್ಣ ತ್ರಿಭುಜ ಬೋಟ್ನಲ್ಲಿ ಮೀನುಗಾರಿಕೆಗೆ ತೆರಳಿದ್ರು. ಮಲ್ಪೆಯ ಮೂವರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರಿದ್ದರು. ಮೀನುಗಾರರ ಸಹಿತ ಬೋಟ್ ನಿಗೂಢವಾಗಿ ಕಾಣೆಯಾಗಿತ್ತು.
ಐಎನ್‌ಎಸ್ ನಿರೀಕ್ಷಕ್ ಯುದ್ಧನೌಕೆ ಸಹಾಯದಿಂದ ಸೋನಾರ್ ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸಲಾಗುತ್ತಿತ್ತು. ಈ ಹಿಂದೆ ಸಮುದ್ರದಾಳದಲ್ಲಿ ದೋಣಿಯ ಕೆಲವು ಅವಶೇಷಗಳು ಪತ್ತೆಯಾಗಿದ್ದವು. ಸಾಗರದಾಳದಲ್ಲಿ ಸುಮಾರು 60-70 ಮೀಟರ್ ಕೆಳಗೆ ದೋಣಿಯ ವಿವಿಧ ಬಗೆಯ ಚಿಕ್ಕ-ದೊಡ್ಡ ಅವಶೇಷ ಪತ್ತೆಯಾಗಿದೆ. ಮಹಾರಾಷ್ಟ್ರದ ಮಾಲ್ವಾನ್ ಕಡಲ ತೀರದಿಂದ 33 ಕಿ.ಮೀ. ದೂರದಲ್ಲಿ ಸುಮಾರು 60 ಮೀಟರ್ ಆಳದಲ್ಲಿ ಅವಶೇಷಗಳು ಪತ್ತೆಯಾಗಿದೆ.
ಹೀಗಾಗಿ, ಮೀನುಗಾರರನ್ನು ಪತ್ತೆಹಚ್ಚುವಂತೆ ಸಾಕಷ್ಟು ಪ್ರತಿಭಟನೆಗಳು ಕೂಡ ನಡೆದಿದ್ವು. ಸದ್ಯ, ನೌಕಾಪಡೆಯ ಐಎನ್‌ಎಸ್ ನಿರೀಕ್ಷಕ್ ಹಡಗಿನ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಮಾಲ್ವಾನ್ ಬಳಿ 60 ಮೀಟರ್ ಆಳದಲ್ಲಿ ಸುವರ್ಣ ತ್ರಿಭುಜ ಬೋಟ್ನ ಅವಶೇಷಗಳನ್ನು ಪತ್ತೆಮಾಡಿದ್ದಾರೆ.